ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯ ರಾಜಕಾರಣದಲ್ಲಿ ಇರಬೇಕು: ಮಹದೇವಪ್ಪ!

0
Spread the love

ಬೆಂಗಳೂರು :- ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯ ರಾಜಕಾರಣದಲ್ಲಿ ಇರಬೇಕು ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಮಾಸ್ ಲೀಡರ್. ಅಂತಹ ಮಾಸ್ ಲೀಡರ್‌ನ ಯಾರಾದರು ಬೇಡ ಅಂತಾರಾ, ಯಾವುದಾದರು ಪಕ್ಷ ಬೇಡ ಅನ್ನುತ್ತಾ ಎಂದರು. ಸಿದ್ದರಾಮಯ್ಯ ಅವರು ಆರೋಗ್ಯವಾಗಿರುವವರೆಗೆ ಫಿಟ್ ಆಗಿರುವವರೆಗೆ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಪಾರ್ಟಿ ದೃಷ್ಟಿಯಿಂದ, ರಾಜ್ಯದ ದೃಷ್ಟಿಯಿಂದ ರಾಷ್ಟ್ರದ ದೃಷ್ಟಿಯಿಂದ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಇದು ಅನಿವಾರ್ಯ ಅಂತ ಹೇಳಲ್ಲ.  ಸಿದ್ದರಾಮಯ್ಯ ಮಾಸ್ ಲೀಡರ್. ಎಲ್ಲಾ ಆಯಾಮದಲ್ಲೂ ನಾಯಕತ್ವ ಅಗತ್ಯವಿದೆ. ಒನ್ ಮ್ಯಾನ್ ಶೋ ಆಗಲ್ವಲ್ಲ. ನಾವೆಲ್ಲರೂ ಅವರ ಜೊತೆ ಸೇರಬೇಕು. ಹೊಸನಾಯಕತ್ವ ಬರುವವರೆಗೆ ಸಿದ್ದರಾಮಯ್ಯ ಇರಬೇಕು ಎಂದು ಹೇಳಿದರು.

ನಾನು ಸಮರ್ಥನಿದ್ದೇನೆ. ನನ್ನ ಸಾಮರ್ಥ್ಯದ ಬಗ್ಗೆ ಅವರ ಅರಿವಿಗೆ ಬರಬೇಕು. ಆಮೇಲೆ ಅವರು ನನ್ನನ್ನ ಗುರುತಿಸಬಹುದು. ಚುನಾವಣೆ ಹೇಗೆ ನಡೆಸಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಆ ಕಾರ್ಯತಂತ್ರದ ಮೂಲಕ ಮಾಡಲಿದೆ. ಸಿದ್ದರಾಮಯ್ಯ ಆರೋಗ್ಯ ಚೆನ್ನಾಗಿರಬೇಕು. ಅವರು ಚೆನ್ನಾಗಿರುವವರೆಗೆ ನಾಯಕತ್ವ ಇರಬೇಕು ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here