ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಮಂಡಿನೋವಿನಲ್ಲೇ ಬರೋಬ್ಬರಿ ಮೂರುವರೆ ಗಂಟೆಯ ಭಾಷಣ ಓದಿದ್ದು, ಹಲವು ಕ್ಷೇತ್ರಗಳಿಗೆ ಹೊಸ ಯೋಜನೆಗಳನ್ನು ಸಿಎಂ ಘೋಷಣೆ ಮಾಡಿದ್ದಾರೆ.
ಕಳೆದ ಬಾರಿಯ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ 38,166 ಕೋಟಿ ಹೆಚ್ಚಳವಾಗಿದೆ. 10.3 ಬೆಳವಣಿಗೆ ದರವಾಗಿದೆ. ಕಳೆದ ಬಾರಿಗಿಂತ ರಾಜಸ್ವ ಸ್ವೀಕೃತಿ 29,299 ಕೋಟಿ ಹೆಚ್ಚಳವಾಗಿದೆ. ಪ್ರಮಾಣ ಶೇ 11.1 ರಷ್ಟಾಗುತ್ತದೆ. ರಾಜಸ್ವ ವೆಚ್ಚದಲ್ಲಿ 21,201 ವ್ಯತ್ಯಾಸ ಇದೆ. ಪ್ರಮಾಣ ಶೇ 7.3 ರಷ್ಟಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಬರಪೀಡಿತ ಜಿಲ್ಲೆಗಳಿಗೆ ಮತ್ತೆ ಬರೆ ಎಳೆದ ಬಜೆಟ್:-
ಬಯಲುಸೀಮೆಗೆ ಶಾಶ್ವತ ನೀರಾವರಿ ಎಂಬುದು ಮರೀಚಿಕೆಯಾಗಿದೆ. ಅಂತರ್ಜಲ ಪಾತಾಳ ತಲುಪಿದೆ, ಕುಡಿಯುವ ನೀರಿನ ಮೂಲಗಳು ವಿಷಮಯವಾಗಿವೆ, ಆದರೂ ಎತ್ತಿನಹೊಳೆಯ ಭ್ರಮೆಯಿಂದ ಹೊರಬಾರದ, ಕೆಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೂ ಮುಂದಾಗದ, ಜೀವನಾಡಿಗಳಾದ ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗೂ ಗಮನ ಕೊಡದ, ಕೃಷ್ಣ-ಪೆನ್ನಾರ್ ನದಿ ಜೋಡಣೆ ಬಗ್ಗೆಯೂ ಚಕಾರವೆತ್ತದ ನಿರಾಶಾದಾಯಕ ಬಜೆಟ್ ಆಗಿದೆ.
ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ಗಾಗಿ ಈಗಿರುವ ಎಂಟು ಪೊಲೀಸ್ ವಿಭಾಗಗಳ ಸಂಖ್ಯೆಯನ್ನು 11 ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ, ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ ಬಳಕೆ ಮತ್ತು ವ್ಯಾಪಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧ ವಿಭಾಗ ಬಲಗೊಳಿಸಲು 5 ಕೋಟಿ ಒದಗಿಸಲು ಘೋಷಣೆ ಮಾಡಲಾಗಿದೆ.
ವಕ್ಪ್ ಸಂಸ್ಥೆ ಆಸ್ತಿಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಖಬರಸ್ತಾನಗಳಲ್ಲಿ ಮೂಲಸೌಕರ್ಯ ಹಾಗೂ ಆಸ್ತಿಗಳ ಸಂರಕ್ಷಣೆಗಾಗಿ 150 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಶಾಲೆಗಳ ಬಿಸಿಯೂಟದ ವ್ಯವಸ್ಥೆಗೆ ಹೆಚ್ಚುವರಿ ಸೌಲಭ್ಯ:-
ಶಾಲೆ-ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ 725 ಕೋಟಿ ರೂ. ಹಾಗೂ ಪೀಠೋಪಕರಣ ಒದಗಿಸಲು 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯಡಿ 16,347 ಶಾಲೆಗಳ ಅಡುಗೆಮನೆ ನವೀಕರಣ ಹಾಗೂ ಪಾತ್ರೆ ಪರಿಕರ ಪೂರೈಕೆಗೆ 46 ಕೋಟಿ ರೂ.
ಅಕ್ಷರ ಆವಿಷ್ಕಾರ ಯೋಜನೆ ಅಡಿ 200 ಕೋಟಿ ರೂ. ವೆಚ್ಚದಲ್ಲಿ ಕೆ.ಪಿ.ಎಸ್. ಶಾಲೆಗಳನ್ನಾಗಿ ಕಲ್ಯಾಣ ಕರ್ನಾಟಕ ಭಾಗದ 50 ಶಾಲೆಗಳ ಉನ್ನತೀಕರಣಕ್ಕೆ ಅನುದಾನ ಮೀಸಲಿಡಲಾಗಿದೆ.
2025-26ನೇ ಸಾಲಿನ ನಮ್ಮ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಘೋಷಣೆ ಮಾಡಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಅಭ್ಯುದಯ:-
* ರಾಜ್ಯದಲ್ಲಿರುವ ಗುರುದ್ವಾರಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು 2 ಕೋಟಿ ರೂಪಾಯಿ ಅನುದಾನ
* ಬೆಂಗಳೂರಿನಲ್ಲಿರುವ ಮಹಾಭೋಧಿ ಅಧ್ಯಯನ ಕೇಂದ್ರದ ಹಳೆಯ ಗ್ರಂಥಾಲಯವನ್ನು 1 ಕೋಟಿ ವೆಚ್ಚದಲ್ಲಿ ಡಿಜಿಟಲೀಕರಣ.
* ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗಾಗಿ 250 ಕೋಟಿ ರೂಪಾಯಿ ಅನುದಾನ.
* 169 ವಸತಿ ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 25 ಸಾವಿರ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ.
* ಜೈನ ಅರ್ಚಕರು, ಸಿಖ್ ಮುಖ್ಯಗ್ರಂಥಿಗಳು, ಮಸೀದಿಗಳ ಪೇಷ್ ಇಮಾಮ್ಗಳ ಮಾಸಿಕ ಗೌರವ ಧನ 6000 ರೂಪಾಯಿಗೆ ಹೆಚ್ಚಳ.
* ಸಿಖ್ ಸಹಾಯಕ ಗ್ರಂಥಿಗಳು ಮತ್ತು ಮೋಝಿನ್ಗಳ ಮಾಸಿಕ ಗೌರವ ಧನ 5000 ರೂಪಾಯಿಗೆ ಹೆಚ್ಚಳ.
* ರಾಷ್ಟ್ರಿಯ ವಿದೇಶಿ ವಿದ್ಯಾರ್ಥಿ ವೇತನ 30 ಲಕ್ಷ ರೂಪಾಯಿಗೆ ಹೆಚ್ಚಳ.
* ಪ್ರಸ್ತುತ 250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ. ಪ್ರಸಕ್ತ ಸಾಲಿನಲ್ಲಿ 100 ಕೋಟಿ ಅನುದಾನ
ಆಯ್ದ ಉರ್ದು ಮಾಧ್ಯಮದ ಶಾಲೆಗಳನ್ನು ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು 100 ಕೋಟಿ ಅನುದಾನ.
* ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಅಗತ್ಯ.
* ಮೂಲಸೌಕರ್ಯಗಳಿಗಾಗಿ 1 ಸಾವಿರ ಕೋಟಿ ಅನುದಾನ.
2025-26ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿನಿಮಾ ಪ್ರಯರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಿಗೆ ಏಕರೂಪ ದರ ನಿಗದಿ ಪಡಿಸೋ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದ ಚಿತ್ರಮಂದಿರ ಹಾಗೂ ಎಲ್ಲಾ ಮಲ್ಟಿಪ್ಲೆಕ್ಸ್ಗಳಲ್ಲಿ ಏಕರೂಪ ದರ ನಿಗದಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಇನ್ಮುಂದೆ ಪ್ರತಿ ಪ್ರದರ್ಶನಕ್ಕೆ 200 ರೂಪಾಯಿ ತೆಗೆದುಕೊಳ್ಳಬೇಕು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಮಲ್ಟಿಪ್ಲೆಕ್ಸ್‌ಗಳು ದುಬಾರಿ ಟಿಕೆಟ್ ದರ ನಿಗದಿಪಡಿಸುತ್ತಿದ್ದವು. ಇದೀಗ ಮಲ್ಟಿಪ್ಲೆಕ್ಸ್‌ಗಳ ದರ ಏರಿಕೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ.