ನವದೆಹಲಿ: ಸಿದ್ದರಾಮಯ್ಯ ಅರ್ಕಾವತಿ ಹಗರಣದ ಹೊಣೆ ಹೊರಬೇಕು ಎಂದು ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಅವರು, ಮುಡಾಕ್ಕಿಂತ ಅರ್ಕಾವತಿ ಹಗರಣ ದೊಡ್ಡದು. ಸಿದ್ದರಾಮಯ್ಯ ಅರ್ಕಾವತಿ ಹಗರಣದ ಹೊಣೆ ಹೊರಬೇಕು. ಯೋಜನಾ ಬದ್ಧವಾಗಿ ಮಾಡಿದ ಮೋಸ ಅರ್ಕಾವತಿ ಹಗರಣ. ಈಗ ಅರ್ಕಾವತಿ ವರದಿ ಮಂಡಿಸಲಿ.
Advertisement
ವರದಿ ಮಂಡಿಸಲು ಸಿದ್ದರಾಮಯ್ಯನವರಿಗೆ ಭಯವೇ? ಹೇಗೆ ಪ್ರಾಮಾಣಿಕ ಎಂದು ಸಿದ್ದರಾಮಯ್ಯ ಹೇಳುತ್ತಾರೋ ಹಾಗೇ ಯಾವುದಕ್ಕೂ ಹೆದರಬೇಡಿ, ಅರ್ಕಾವತಿ ವರದಿ ಮಂಡಿಸಿ ಎಂದು ಒತ್ತಾಯಿಸಿದರು. ರಾಜ್ಯಪಾಲರಿಗೆ ಲಗಾಮು ಹಾಕುತ್ತೇವೆ ಎಂದು ಹೋದರು. ಸಂವಿಧಾನಕ್ಕೆ ಲಗಾಮು ಹಾಕೋಕೆ ಆಗುತ್ತಾ? ನೂರು ಜನರು ಬಂದರೂ ಆಗಲ್ಲ. ಬೆದರಿಕೆ ಎಲ್ಲಾ ಗೂಂಡಾ ರಾಜ್ಯದಲ್ಲಿ ನಡೆಯುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು.