ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ನಾರಾಯಣಸ್ವಾಮಿ

0
Spread the love

ಹಾವೇರಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು. 10 ಗಂಟೆಗೆ ಸಿದ್ದರಾಮಯ್ಯ ತನಿಖೆಗೆ ಹೋಗಿದ್ದಾರೆ. ಎರಡು ತಾಸಿಗೆ ವಿಚಾರಣೆ ಮುಗಿದು ಹೋಗುತ್ತದೆ. ಇದು ಪೂರ್ವನಿರ್ಧಾರಿತವಾಗಿದೆ. ಈ ವಿಚಾರಣೆಯಿಂದ ಸತ್ಯ ಹೊರಗೆ ಬರುವುದು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು.

Advertisement

ಇವರೇ ಸ್ಕ್ರಿಪ್ಟ್ ಬರೆದುಕೊಟ್ಟು ಇವರೇ ಉತ್ತರ ಕೊಟ್ಟು ಹೀಗೇ ಕೇಳಬೇಕು ಎಂದು ಇವರೇ ಹೇಳಿಕೊಟ್ಟಿದ್ದಾರೆ. ಇಷ್ಟೇ ಪ್ರಶ್ನೆ ಕೇಳ್ತಾರೆ, ಇಷ್ಟೇ ಸಮಯಕ್ಕೆ ಮುಗಿಯುತ್ತದೆ ಎಂಬುದು ಮೊದಲೇ ಸಿದ್ದರಾಮಯ್ಯಗೆ ಗೊತ್ತಾ? ಇದೆಲ್ಲ ಸ್ಟೆಜ್ ಮ್ಯಾನೇಜ್ಡ್ ವಿಚಾರಣೆ. ನಿಮ್ಮನ್ನು ಕಂಡು ಲೋಕಾ ಅಧಿಕಾರಿಗಳಿಗೆ ಭಯ ಬಂದಿರಬೇಕು. ಎಲ್ಲರ ಬಗ್ಗೆಯೂ ಮಾತನಾಡುವ ಸಿಎಂ ನೀವು ಮಾತ್ರ ಹೇಗೆ ಅಧಿಕಾರದಲ್ಲಿ ಇರ್ತೀರಿ? ನಾಗೇಂದ್ರನನ್ನು ಜೈಲಿಗೂ ಕಳಿಸಿದ್ರಿ, ರಾಜೀನಾಮೆ ಪಡೆದು ಕೆಳಗೆ ಇಳಿಸಿದ್ದೀರಿ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here