ಬೆಂಗಳೂರು: ಸಿದ್ದರಾಮಯ್ಯ ಅವ್ರು ಹೊಸ ಜಾತಿಗಳ ಸೃಷ್ಟಿಸಿ ಶಾಶ್ವತ ಅಪರಾಧಿ ಆಗೋದು ಬೇಡ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವ್ರು ಹೊಸ ಜಾತಿಗಳನ್ನು ಸೃಷ್ಟಿಸಿ ಶಾಶ್ವತ ಅಪರಾಧಿ ಆಗೋದು ಬೇಡ. ಇವತ್ತು ರಾಜ್ಯಪಾಲರಿಗೂ ಈ ಸಂಬಂಧ ದೂರು ಕೊಡ್ತೇವೆ ಎಂದು ತಿಳಿಸಿದ್ದಾರೆ.
ಇನ್ನೂ ಒಬಿಸಿ ವರ್ಗಗಳ ಮೀಸಲಾತಿ ಕಸಿಯುವ ಕೆಲಸಕ್ಕೆ ಮುಸುಕು ಹಾಕಿಕೊಂಡು ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ. ನಮ್ಮ ದೂರು, ಆಕ್ಷೇಪಣೆಗಳಿಗೆ ಹಿಂದುಳಿದ ವರ್ಗಗಳ ಆಯೋಗ ಕಿವಿಗೆ ಹಾಕಿಕೊಂಡಿಲ್ಲ. ಸರ್ಕಾರ ಅರಾಜಕತೆ ಸೃಷ್ಟಿಸಲು ಹೊರಟಿದೆ, ಇದಕ್ಕೆ ನಾವು ಬಿಡಲ್ಲ.
ಇವತ್ತಿನ ಸಭೆ ನೂರಕ್ಕೂ ಹೆಚ್ಚು ಗಣ್ಯರು ಬರ್ತಾರೆ. ಮುಂದಿನ ಒಂದು ವಾರದಲ್ಲಿ ಹೋರಾಟ ಮಾಡ್ತೇವೆ. ರಾಜ್ಯಪಾಲರು ಮಧ್ಯಪ್ರವೇಶಕ್ಕೆ ಕೋರುತ್ತೇವೆ. ಈ ಹೊಸ ಜಾತಿಗಳ ಪಟ್ಟಿ ತೆಗೆಯುವಂತೆ ಸರ್ಕಾರಕ್ಕೆ ನಿರ್ದೇಶನ ಕೊಡಲು ರಾಜ್ಯಪಾಲರಿಗೂ ಭೇಟಿ ಮಾಡಿ ಮನವಿ ಮಾಡ್ತೇವೆ ಎಂದಿದ್ದಾರೆ.