ಮಂಡ್ಯ: ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಸಿದ್ದರಾಮಯ್ಯ ಪಡೆದಿರುವ 14 ಸೈಟ್ ಅನ್ನೂ ವಾಪಸ್ಸು ನೀಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಲಾಯರ್ ಓದಿದ್ದೀನಿ ಅಂತೀರಾ, ಎರಡು ವರ್ಷ ಪಾಠ ಮಾಡಿದ್ದೀನಿ ಅಂತೀರಾ. ಬೇರೆ ಕಡೆ ಖಾಲಿ ಇದೆ ಎಂದು ಸೈಟ್ ಬರೆಸಿಕೊಳ್ತೀರಾ? ಎಂದು ಸಿದ್ದರಾಮಯ್ಯ ಧಾಟಿಯಲ್ಲಿ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಕೇವಲ 14 ಸೈಟ್ ಮಾತ್ರ ನುಂಗಿಲ್ಲ, ಸಿದ್ದರಾಮಯ್ಯ ಬೆಂಬಲಿಗರು 500 ಕ್ಕೂ ಹೆಚ್ಚು ಸೈಟ್ ನುಂಗಿದ್ದಾರೆ. 50:50 ಸ್ಕೀಮ್ ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಇದನ್ನ ಮುಡಾ ಅಧ್ಯಕ್ಷ ಮರೀಗೌಡನೆ ಪತ್ರದ ಮೂಲಕ ತಿಳಿಸಿದ್ದಾನೆ. 82 ಸಾವಿರ ನಾಗರೀಕರು ಸೈಟ್ ಗಾಗಿ ಕಾಯುತ್ತಿದ್ದಾರೆ. ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು. ಸಿದ್ದರಾಮಯ್ಯ ಪಡೆದಿರುವ 14 ಸೈಟ್ ಅನ್ನೂ ವಾಪಸ್ಸು ನೀಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.