ವಿಜಯಪುರ: ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಕಲ್ಲಿನ ಹೃದಯದವರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅತಿಮಾನುಷ ಶಕ್ತಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿಗೆ ಕಾರಣವಾ?
Advertisement
ಔಷಧಿ ಕಾರಣವಾಗಿದ್ದರೆ ಪೂರೈಕೆದಾರರ ಮೇಲೆ ಕ್ರಮವಾಗಲಿ. ವೈದ್ಯರಾಗಿದ್ದರೆ ಅವರ ಮೇಲೂ ಕ್ರಮವಾಗಲಿ. ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಕಲ್ಲಿನ ಹೃದಯದವರಾಗಿದ್ದಾರೆ ಎಂದರು.
ಇನ್ನೂ ರಾಜ್ಯ ಸರ್ಕಾರ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ಬಾಣಂತಿಯರ ಸಾವಿನ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ಆಗಲಿ. ಸರ್ಕಾರದ ಸಚಿವರ ಮೇಲೆ ನಮಗೆ ನಂಬಿಕೆಯಿಲ್ಲ. ಎಕ್ಸ್ಪರ್ಟ್ ಕಮಿಟಿ ತನಿಖೆ ಮಾಡಲಿ ಎಂದು ಹೇಳಿದರು.