ದಾವಣಗೆರೆ: ಡಿಕೆಶಿ ಅವರನ್ನು ಸಿಎಂ ಆಗಲು ಸಿದ್ದರಾಮಯ್ಯ ಬಿಡೋದಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಗೊಂದಲವಿದೆ. ಡಿಕೆಶಿ ಅವರನ್ನು ಸಿಎಂ ಆಗಲು ಸಿದ್ದರಾಮಯ್ಯ ಬಿಡೋದಿಲ್ಲ ಎಂದರು.
ಇನ್ನೂ ಬಹಳಷ್ಟು ವರ್ಷಗಳಿಂದ ಸಿದ್ದರಾಮಯ್ಯರನ್ನು ನಾನು ನೋಡಿಕೊಂಡು ಬಂದಿದ್ದೇನೆ. ಯಾವಾಗ ಸರ್ಕಾರಕ್ಕೆ ಅಭದ್ರತೆ ಕಾಣಿಸಿಕೊಂಡಿತೋ, ಆಗ ಸರ್ಕಾರ ಕೆಡವುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರು ಸರ್ಕಾರ ಕೆಡವುತ್ತಾರೆಯೇ ವಿನಃ ಅವರ ಖುರ್ಚಿ ಬಿಟ್ಟುಕೊಡಲು ಮುಂದಾಗುವುದಿಲ್ಲ. ಈಗಾಗಲೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದರು.
ದಲಿತರಾದರೆ ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಆಗಬೇಕು. ಎಸ್ಟಿಯಲ್ಲಾದರೆ ಸತೀಶ್ ಜಾರಕಿಹೊಳಿ, ಲಿಂಗಾಯತರಲ್ಲಿ ಎಂ.ಬಿ.ಪಾಟೀಲ್ ಆಗಬೇಕು. ಹೀಗೆ ಅನೇಕ ಸಮುದಾಯಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಾ ಬಂದಿದ್ದಾರೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆಯೇ ವಿನಃ ಡಿಕೆಶಿಯನ್ನು ಸಿಎಂ ಆಗೋಕೆ ಬಿಡೋದಿಲ್ಲ ಎಂದರು.