ಹುಬ್ಬಳ್ಳಿ: ಸಿದ್ದರಾಮಯ್ಯ ಯಾವ ಸಮಯದಲ್ಲಿ ಬೇಕಾದರೂ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಸಿಎಂ ಸ್ಥಾನ ಅಲುಗಾಡುತ್ತಿದೆ. ಎಲ್ಲಿಯವರೆಗೆ ಸಿದ್ದರಾಮಯ್ಯ ಭಂಡತನ ಮುಂದುವರೆಸುತ್ತಾರೋ ಅಲ್ಲಿಯವರೆಗೂ ಸಿಎಂ ಆಗಿ ಇರುತ್ತಾರೆ.
ಇದು ಬಹಳಷ್ಟು ದಿನ ನಡೆಯುವುದಿಲ್ಲ. ಇದನ್ನು ಈ ಸರ್ಕಾರದ ಸಚಿವರೇ ಸಹಿಸುವುದಿಲ್ಲ. ಯಾವುದೇ ಅನುಮಾನ ಬೇಡ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ. ಅವರಿಗೆ ಗೊತ್ತಿದೆ, ಸಿದ್ದರಾಮಯ್ಯ ಯಾವ ಸಮಯದಲ್ಲಿ ಬೇಕಾದರೂ ರಾಜೀನಾಮೆ ನೀಡುತ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಪಡೆಯಲು ಸಿದ್ದರಾಮಯ್ಯ ಪರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರದ ಸಚಿವರೇ ಸಿಎಂ ಬದಲಾವಣೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಕಾಂಕ್ಷಿಗಳು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ. ಯಾರೆಲ್ಲಾ ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂದು ಹೇಳುತ್ತಿದ್ದಾರೋ, ಅವರೆಲ್ಲ ಮುಖ್ಯಮಂತ್ರಿಗಳ ಆಕಾಂಕ್ಷಿಗಳು ಎಂದು ಹೇಳಿದರು