ಹುಬ್ಬಳ್ಳಿ: ಹೈ ಕಮಾಂಡ್ ಸೂಚನೆ ಕೊಟ್ಟರೂ ಸಹ ಸಿದ್ದರಾಮಯ್ಯ ರಾಜೀನಾಮೆ ಕೊಡೋದಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Advertisement
ಅವರೇ ಹೈಕಮಾಂಡ್ ಅಲ್ಲ. ಅವರ ಅಸ್ತಿತ್ವ ಸಹ ಇಲ್ಲ. ಹೀಗಾಗಿ, ಸರ್ಕಾರ ಪತನದ ಅಂಚಿನಲ್ಲಿದೆ. ಅಧಿಕಾರದಲ್ಲಿರಿ ಅಂತ ಸಂಗೀತ ನುಡಿಸುತ್ತಿರುತ್ತಾರೆ. ಡಿಕೆ ಮುಖ್ಯಮಂತ್ರಿ ಆಗಬೇಕು ಅನ್ನೋ ಹಠವನ್ನ ಬಿಡೋದಿಲ್ಲ. ಇವರ ಗುದ್ದಾಟಕ್ಕೆ ಸರ್ಕಾರ ಪತನ ಆಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತನಾಡಿ, ಅವರು ಅನುಭವ ಇದ್ದ ವ್ಯಕ್ತಿ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಇದ್ದಾಗ ಅವರನ್ನ ನೋಡಿದವರು. ಆ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಡಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.


