ಅರ್ಧಕ್ಕೆ ನಿಂತ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ “ಲೀಡರ್ ರಾಮಯ್ಯ”: ಮುಡಾ ಹಗರಣ ಕಾರಣವಾ!?

0
Spread the love

ಕೊಪ್ಪಳ: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

Advertisement

ನಟ ಸಿದ್ದಾರಾಮಯ್ಯ ಅವರ ಜೀವನ ಆಧರಿಸಿ ಸಿನಿಮಾ ಮಾಡೋ ಘೋಷಣೆ ಆಗಿ ವರ್ಷಗಳೇ ಕಳೆದಿವೆ. ಈ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿತ್ತು. ಆದರೆ, ಈಗ ಅವರ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ. ಮುಡಾ ಹಗರಣದ ಹಾಗೂ ಚಿತ್ರದ ನಾಯಕನ ಡೇಟ್ ಸಮಸ್ಯೆ ಹಿನ್ನೆಲೆಯೆಲೆಯಲ್ಲಿ ಶೂಟಿಂಗ್​ಗೆ ಬ್ರೇಕ್ ಹಾಕಲಾಗಿದೆ.

ಮುಡಾ ಹಗರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಪತ್ನಿಗೆ ನೀಡಲಾದ ಸೈಟ್​ನಲ್ಲಿ ಸಿದ್ದರಾಮಯ್ಯ ಪ್ರಭಾವ ಇದೆ ಎಂದು ಹೇಳಲಾಗುತ್ತಿದೆ. ಅವರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಈ ಕಾರಣಕ್ಕೆ ಚಿತ್ರ ತಂಡ ಶೂಟಿಂಗ್ ನಿಲ್ಲಿಸಿ ರಾಜಕೀಯ ಬೆಳವಣಿಗೆ ಕಡೆಗೆ ಗಮನ ಹರಿಸುತ್ತಿದೆ.

ಮೈಸೂರು ಭಾಗದಲ್ಲಿ ಸಿಎಂ ಬಾಲ್ಯದ ಜೀವನದ ಚಿತ್ರೀಕರಣ ಪೂರ್ಣಗೊಂಡಿದೆ. ಮುಡಾ ಪ್ರಕರಣ ಹಿನ್ನೆಲೆ 2ನೇ ಭಾಗದ ಸನ್ನಿವೇಶಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಮುಡಾ ಬೆಳವಣಿಗೆಯನ್ನು ಸಿನಿಮಾದಲ್ಲಿ ಸೇರಿಸಲು ಚಿಂತನೆ ನಡೆದಿದೆ.

ಕಾಲಿವುಡ್​ನ ಖ್ಯಾತ ಹೀರೋ ವಿಜತ್ ಸೇತುಪತಿ ಈ ಸಿನಿಮಾದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕಾರಣಕ್ಕೆ ವಿಜಯ್ ಸೇತುಪತಿ ಅವರ ಡೇಟ್ ಸಮಸ್ಯೆಯಾಗಿದೆ. ಈ ಹಿನ್ನೆಲೆ ಲೀಡರ್ ರಾಮಯ್ಯ ಚಿತ್ರದ ಶೂಟಿಂಗ್ ಸ್ಥಗಿತ ಮಾಡಿದ್ದೇವೆ ಎಂದು ಕೊಪ್ಪಳದಲ್ಲಿ ಚಿತ್ರದ ನಿರ್ಮಾಪಕ ಹಯ್ಯಾತ್ ಪೀರ್ ಸ್ಪಷ್ಟನೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here