ಬೆಂಗಳೂರು: 200ನೇ ಕಿತ್ತೂರು ವಿಜಯೋತ್ಸವ ಆಚರಣೆ ನಿಮಿತ್ತ ಜ್ಯೋತಿ ಬೆಳಗುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ಬಟ್ಟೆಗೆ ಬೆಂಕಿಯ ಬಿಸಿ ತಾಗಿದ ಘಟನೆ ನಡೆದಿದೆ. ಜ್ಯೋತಿ ಬೆಳಗಿಸುವಾಗ ಅವರ ಬಟ್ಟೆಗೆ ಕಿಡಿ ತಾಗಿದ್ದು, ವಿಧಾನಸೌಧದ ಗ್ರ‍್ಯಾಂಡ್ ಸ್ಟೆಪ್ ನಲ್ಲಿ 200ನೇ ಕಿತ್ತೂರು ವಿಜಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಇಂದು ಸಿಎಂ ಚಾಲನೆ ನೀಡಿದರು.
ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಜಾಗ ಬಿಡಲು ಸಿಎಂ ಮುಂದಾದರು.ಈ ವೇಳೆ ಸಿಎಂ ದೀಪದ ಹತ್ತಿರ ಬಂದಾಗ ಎಡಕೈಗೆ ಬೆಂಕಿಯ ಕಿಡಿ ತಾಗಿದೆ. ಬಟ್ಟೆಗೆ ಆಕಸ್ಮಿಕವಾಗಿ ತಾಕಿದ ಕಿಡಿಯನ್ನು ಕೂಡಲೇ ಭದ್ರತಾ ಸಿಬ್ಬಂದಿ ಆರಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



