HomeBengaluru Newsಸಿದ್ದರಾಮಯ್ಯ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕ್ತಿದ್ದಾರೆ: ಆರ್ ಅಶೋಕ್!

ಸಿದ್ದರಾಮಯ್ಯ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕ್ತಿದ್ದಾರೆ: ಆರ್ ಅಶೋಕ್!

For Dai;y Updates Join Our whatsapp Group

Spread the love

ಬೆಂಗಳೂರು:- ಸಿದ್ದರಾಮಯ್ಯ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕ್ತಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ದೀಪಾವಳಿಯಲ್ಲಿ ಸಿಎಂಗೆ ಬಾಂಬ್, ಆಟಂ ಬಾಂಬ್, ರಾಕೆಟ್ ಬಾಂಬ್ ಯಾರ‍್ಯಾರಿಟ್ಟಿದ್ದಾರೋ ಗೊತ್ತಿಲ್ಲ. ಆದ್ರೆ ಬಾಂಬ್ ಸಿಡಿಯೋದು ಖಚಿತ ಎಂದು ಲೇವಡಿ ಮಾಡಿದರು.

ಸಿಎಂ ಹುದ್ದೆಗೆ ನಡೆಯುತ್ತಿರುವ ಪೈಪೋಟಿ ಬಿಜೆಪಿಯವರಿಗಿಂತಲೂ ಕಾಂಗ್ರೆಸ್‌ನವರಿಗೆ ಖಚಿತವಾಗಿದೆ. ಸಿಎಂ ಬದಲಾವಣೆ ನಿಶ್ಚಿತವಾಗಿಬಿಟ್ಟಿದೆ. ಕೋರ್ಟ್‌ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಲೇ ಇದೆ. ತೀರ್ಪಿಗೂ ಕಾಯದೇ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿ ಕಾಂಗ್ರೆಸ್‌ನವರೇ ಕಾಯುತ್ತಿದ್ದಾರೆ ಎಂದರು.

ಈಗ ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಸೀನಿಯಾರಿಟಿ ಅಭಿಯಾನ ನಡೆಯುತ್ತಿದೆ. ದೇಶಪಾಂಡೆ ನಂತರ ಸತೀಶ್ ಜಾರಕಿಹೊಳಿ ಅಭಿಯಾನ ನಡೆಸುತ್ತಿದ್ದಾರೆ. ಎಂ.ಬಿ.ಪಾಟೀಲ್ ನಾನೇ ಸೀನಿಯರ್ ಅಂತಿದ್ದಾರೆ. ಪರಮೇಶ್ವರ್, ತಮಗೆ ಹಿಂದೆ ಅನ್ಯಾಯ ಆಗಿದೆ. ಅದನ್ನು ಸರಿಪಡಿಸಿ ಸಿಎಂ ಮಾಡಿ ಅಂತಿದ್ದಾರೆ. ಬೇರೆಯವರೆಲ್ಲ ಸಿಎಂ ಕುರ್ಚಿಗೆ ಟವೆಲ್ ಹಾಕ್ತಿದ್ರೆ ಡಿಕೆಶಿ ಅವರು ಸ್ಟಿಕ್ಕರ್ ಅಂಟಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರ ಪರ ಬಂಡೆಯಂತೆ ಇದ್ದೀವಿ ಅನ್ನೋರೇ ಸಿಎಂ ಆಗ್ತೀವಿ ಅಂತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ದಿನದಿನಕ್ಕೆ ಮ್ಯೂಸಿಕಲ್ ಚೇರ್ ತರ ಫೈಟಿಂಗ್ ಜೋರಾಗಿದೆ. ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಸಲ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!