ಬೆಂಗಳೂರು:- ಒಂದೆಡೆ ರಾಜ್ಯದಲ್ಲಿ ಪವರ್ ಶೇರಿಂಗ್ ಕೋಲಾಹಲ ಧಗಿಧಗಿಸುತ್ತಿದೆ. ಈ ಮಧ್ಯೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ.
ದೆಹಲಿಯಲ್ಲಿ ಕೆಲಸ ಮುಗಿಸಿ ನಾಳೆ ಬಿಹಾರಕ್ಕೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಎಐಸಿಸಿ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಬಿಹಾರದಲ್ಲಿ ರಣದೀಪ್ ಸುರ್ಜೇವಾಲರನ್ನೂ ಭೇಟಿಯಾಗಲಿದ್ದಾರೆ. ಈ ಮಧ್ಯೆ ಕೈ ನಾಯಕರ ದೆಹಲಿ ಭೇಟಿಗೆ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಬ್ರೇಕ್ ಹಾಕಿದ್ದಾರೆ. ಬಿಹಾರ ಫಲಿತಾಂಶ ಬರೋವರೆಗೂ ಎಲ್ಲರೂ ಸಮಾಧಾನದಿಂದ ಕಾಯಬೇಕು ಎಂದು ಸೂಚಿಸಿದ್ದಾರೆ.
ಪವರ್ ಶೇರಿಂಗ್ ಗೊಂದಲಕ್ಕೆ ತೆರೆ ಎಳೆಯಲು ಡೆಲ್ಲಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ ನವೆಂಬರ್ 15 ರಂದು ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ. ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆದರೂ ಪವರ್ ಶೇರಿಂಗ್ ಬಗ್ಗೆ ಕ್ಲಾರಿಟಿ ಸಿಗುವ ಭೇಟಿ ಇದಾಗಿರಲಿದೆ. ಸಿಎಂ ಜೊತೆ ಡಿಸಿಎಂಗೂ ಹೈಕಮಾಂಡ್ ಆಹ್ವಾನ ನೀಡುತ್ತಿದ್ಯಾ ಅನ್ನೋ ಕುತೂಹಲವೂ ಮನೆಮಾಡಿದೆ.


