ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿ ಮಾಡಿದ ‘ಸಿಕಂದರ್’..! ಮೊದಲ ದಿನ ಕಲೆಕ್ಷನ್‌ ಎಷ್ಟು ಗೊತ್ತಾ..?

0
Spread the love

‘ಸಿಕಂದರ್’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಭರ್ಜರಿ ಯಶಸ್ಸು ಪಡೆಯುವ ಆಸೆಯನ್ನು ಸಲ್ಮಾನ್ ಖಾನ್ ಇಟ್ಟುಕೊಂಡಿದ್ದರು. ಆದರೆ ಸಲ್ಮಾನ್ ಖಾನ್ ಗೆ ಶಾಕ್‌ ಆಗಿದೆ. ಸಲ್ಮಾನ್ ಖಾನ್ ಅವರ ಸಿನಿಮಾಗಳು ಇತ್ತೀಚೆಗೆ ಸೋಲು ಕಂಡಿದ್ದೇ ಹೆಚ್ಚು.

Advertisement

ಟ್ರೇಲರ್ ನೋಡಿದ್ದ ಅನೇಕರು ‘ಸಿಕಂದರ್’ ಗೆಲ್ಲಬಹುದು ಎಂಬ ನಿರೀಕ್ಷೆ ಹೊರಹಾಕಿದ್ದರು. ಆದರೆ, ನಿರ್ದೇಶಕ ಎಆರ್​ ಮುರುಗದಾಸ್ ಅವರ ಚಮತ್ಕಾರ ಇಲ್ಲಿ ಕೆಲಸ ಮಾಡಿಲ್ಲ. ಈ ಸಿನಿಮಾ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಮಾಡಿದೆಯಷ್ಟೆ.

ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಇತ್ತೀಚೆಗೆ ಅವರ ಚಿತ್ರಗಳು ಮಂಕಾಗಿವೆ. ಯಾವುದೇ ಬಿಗ್ ಬಜೆಟ್ ಬಾಲಿವುಡ್ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕರೆ ಅಂಥ ಸಿನಿಮಾಗಳು ಮೊದಲ ದಿನ 40-50 ಕೋಟಿ ರೂಪಾಯಿ ಬಾಚಿಕೊಳ್ಳುತ್ತವೆ. ಆದರೆ, ಸಲ್ಲು ಸಿನಿಮಾಗೆ ಆ ರೀತಿ ಆಗಿಲ್ಲ. 26 ಕೋಟಿ ರೂಪಾಯಿ ದೊಡ್ಡ ಮೊತ್ತವೇ ಆದರೂ ಸಲ್ಲು ಖದರ್​ಗೆ ಈ ಸಂಖ್ಯೆ ಕಡಿಮೆಯೇ ಸರಿ.

ಇನ್ನು ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗಿದ್ದು ಭಾನುವಾರ. ರಜಾ ದಿನ. ಈ ದಿನ ಸಿನಿಮಾ ರಿಲೀಸ್ ಆದ ಹೊರತಾಗಿಯೂ ಚಿತ್ರಕ್ಕೆ ಅಂಥ ದೊಡ್ಡ ಗಳಿಕೆ ಏನೂ ಆಗಿಲ್ಲ. ಇನ್ನು, ಚಿತ್ರದ ಬಜೆಟ್ ಬರೋಬ್ಬರಿ 200 ಕೋಟಿ ರೂಪಾಯಿ. ಹೀಗಾಗಿ, ಸಿನಿಮಾ ಲಾಭ ಮಾಡಬೇಕು ಎಂದರೆ ಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ಅವಶ್ಯಕತೆ ಇದೆ.


Spread the love

LEAVE A REPLY

Please enter your comment!
Please enter your name here