ಬೆಂಗಳೂರು:- ದಿನಗೂಲಿ ನೌಕರರಿಗೆ ಆರ್ಥಿಕ ಸೌಲಭ್ಯ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ದಿನಗೂಲಿ ನೌಕರರಿಗೆ ಸರ್ಕಾರದಿಂದ ದಸರಾ ಗಿಫ್ಟ್ ಸಿಕ್ಕಿದೆ.
Advertisement
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಅಡಿಯಲ್ಲಿ ಸೇವೆಯನ್ನು ಮುಂದುವರೆಸಲು ಅರ್ಹರಾಗಿರುವ ದಿನಗೂಲಿ ನೌಕರರಿಗೆ ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯಲ್ಲಿ ಕನಿಷ್ಠ ವೇತನವನ್ನು ಪಾವತಿಸಬೇಕೆಂದು ಸರ್ಕಾರವು ಆದೇಶಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ನೀಡಲಾಗುವ ತುಟ್ಟಿಭತ್ಯೆಯ ಶೇಕಡಾ 75 ರಷ್ಟು, ಅವರ ಕರ್ತವ್ಯದ ಸ್ಥಳಕ್ಕೆ ಕಾಲಕಾಲಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯ ಸಾಮಾನ್ಯ ದರದ ಶೇಕಡಾ 75 ರಷ್ಟು ರಾಜ್ಯ ಸರ್ಕಾರಿ ನೌಕರರು ಅರ್ಹ ದಿನಗೂಲಿ ನೌಕರರಿಗೆ ಮನೆ ಬಾಡಿಗೆ ಭತ್ಯೆಯಾಗಿ ಮಂಜೂರು ಮಾಡುವಂತೆ ಆದೇಶಿಸಲಾಗಿದೆ.
ಮತ್ತೇಕೆ ದಿನಗೂಲಿ ಗಳೆಂದು ಸಂಬೋದಿಸುವದು ಸರ್ಕಾರಿ ನೌಕರರ ಸ್ಥಾನಮಾನ ನೀಡಿದರೆ ಇನ್ನೂ ಹೆಚ್ಚು
ಆತ್ಮಸ್ಥೈರ್ಯ ತುಂಬಿದಂತಾಗುವದು ಇದರ ಬಗ್ಗೆಸರ್ಕಾರ
ಮುಂದಿನ ದೀಪಾವಳಿಗೆ ಮತ್ತೊಂದು ಸಿಹಿ ಸುದ್ಧಿನೀಡುವ
ಚಿಂತನೆ ನಡೆಸಲಿ