ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲೋಕ ಕಲ್ಯಾಣಕ್ಕಾಗಿ, ಯೋಧರ ಹಾಗೂ ರೈತರ ಒಳತಿಗಾಗಿ ತಾಲೂಕಿನ ಆದರದಹಳ್ಳಿ ಗವಿ ಸಿದ್ದೇಶ್ವರ ಗುರುಪೀಠದ ಕುಮಾರ ಮಹಾರಾಜರ 12 ದಿನಗಳ ಮೌನವ್ರತ ಅನುಷ್ಠಾನ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಕೈಗೊಳ್ಳಲಿದ್ದಾರೆ ಎಂದು ಗವಿ ಸಿದ್ದೇಶ್ವರ ಮಠದ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
12 ದಿನಗಳ ಕಾಲ ನಡೆಯುವ ಈ ಮೌನ ಅನುಷ್ಠಾನದಲ್ಲಿ ಶ್ರೀಮಠದ ಭಕ್ತರು ವಿವಿಧ ನಿತ್ಯ ಧಾರ್ಮಿಕ ಕೈಂಕರ್ಯಗಳನ್ನು, ದಾಸೋಹ ಸೇವೆಗಳನ್ನು ನಡೆಸಲಿದ್ದಾರೆ. ಆ.29ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 9ರಂದು ಮಂಗಳವಾಗಲಿದೆ.
ಅನುಷ್ಠಾನದ ಕುರಿತು ಶ್ರೀ ಕುಮಾರ ಮಹಾರಾಜರು, ಜಗತ್ತಿನ ಕಲ್ಯಾಣಕ್ಕಾಗಿ ಕೈಗೊಂಡ ಮೌನವ್ರತ ಫಲ ಕೊಡಲಿದೆ. ಸಾಂಕ್ರಾಮಿಕ ರೋಗದ ಪರದಾಟ ನಿಲ್ಲಲಿದೆ. ಮುಂದಿನ ದಿನಮಾನದಲ್ಲಿ ರೈತರಿಗೆ ಹಾಗೂ ಯೋಧರಿಗೆ ಒಳಿತಾಗಲಿದೆ ಎಂದು ನುಡಿದಿದ್ದಾರೆ.