ಬೆಂಗಳೂರು:– ನಗರದ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
Advertisement
ರಾಜಾನುಕುಂಟೆ ಉಪಕೇಂದ್ರ ಮತ್ತು ಸಾರಕ್ಕಿ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಿನ್ನಲೆ ಬೆಳಿಗ್ಗೆ 10 ರಿಂದ 4 ರವರೆಗೆ ಪವರ್ ಕಟ್ ಇರಲಿದೆ. ಅದರಂತೆ ಸಿಂಗ ನಾಯಕನಹಳ್ಳಿ, ಹೊನ್ನೇನಹಳ್ಳಿ, ಅಡ್ಡವಿಶ್ವನಾಥಪುರ, ರಾಜಾನು ಕುಂಟೆ, ಶ್ರೀರಾಮನಹಳ್ಳಿ, ಮಾರಸಂದ್ರ, ಹನಿಯೂರು, ನೆಲಕುಂಟೆ, ಕೆಎಂಎಫ್, ಚೆಲ್ಲ ಹಳ್ಳಿ, ಬೂದಮನಹಳ್ಳಿ, ಬೈರಾಪುರ, ಕಾಕೋಲು, ದಿಟ್ಟೂರು, ಸೊನ್ನೇನಹಳ್ಳಿ ಸೇರಿದಂತೆ ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.