ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ದೇವಾಂಗ ನೌಕರರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ 7ನೇ ಅಂತಾರಾಷ್ಟ್ರೀಯ ದೇವಾಂಗ ವಧು-ವರರ ಸಮಾವೇಶವನ್ನು ಮೇ 25 ಮತ್ತು 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಕೊಪ್ಪಳ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 25ರಂದು ಬೆಳಗ್ಗೆ 10 ಗಂಟೆಗೆ ಸಂಘದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಬೆಟಗೇರಿಯ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ದೇವಾಂಗ ವಧು-ವರರ ಸಮಾವೇಶವನ್ನು ಗದಗ ನಗರದ ಗಾಣಿಗ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ವಧು-ವರರ ಸಮಾವೇಶಕ್ಕೆ ಬೇರೆ ಬೇರೆ ರಾಜ್ಯದಿಂದ ಸಮಾಜದ ಯುವಕ-ಯುವತಿಯರು ಆಗಮಿಸಲಿದ್ದಾರೆ.
ಈಗಾಗಲೇ 400ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ವಿದೇಶದಲ್ಲಿರುವ ದೇವಾಂಗ ಸಮಾಜದ ಅವಿವಾಹಿತರು ಸಹ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಅರವಿಂದ ಗಂಜಿ, ಶಿವಾನಂದ ಕಲ್ಲೂರ, ವಿ.ಆರ್. ಕೋಟಿ, ರಾಜೇಂದ್ರ ಭರದ್ವಾಡ, ಶಿವಾನಂದ ಗಿಡ್ನಂದಿ, ಎಸ್.ಕೆ. ಮಾಗೊಂಡ, ಈರಪ್ಪ ಸಂಡೂರ, ವಿನಾಯಕ ಹೊಸಮನಿ, ಎಸ್.ಎಚ್. ಸೂಳಿಕೇರಿ, ದೊಡ್ಡಪ್ಪ ಮೂಲಿಮನಿ ಇತರರು ಉಪಸ್ಥಿತರಿದ್ದರು.



