ಗದಗ-ಬೆಟಗೇರಿಯಲ್ಲಿ ಸೇವಾಭಾರತಿ ಟ್ರಸ್ಟ್‌ ನ ರಜತ ಸಂಭ್ರಮಾಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜ ಸೇವೆಯ ಮುಖ್ಯ ಉದ್ದೇಶವಿಟ್ಟುಕೊಂಡು ಕಳೆದ 25 ವರ್ಷಗಳಿಂದ ತನ್ನನ್ನು ಸಮರ್ಪಿಸಿಕೊಂಡಿರುವ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್ ರಜತ ಸಂಭ್ರಮ ಆಚರಣೆಯ ನಿಮಿತ್ತ ಗದುಗಿನಲ್ಲಿ ರವಿವಾರ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ ಉಚಿತ ಔಷಧ ವಿತರಣೆಯ ಶಿಬಿರವನ್ನು ಏರ್ಪಡಿಸಿತ್ತು.

Advertisement

ಗದುಗಿನ ವೀರರಾಣಿ ಕಿತ್ತೂರ ರಾಣಿ ಚನ್ನಮ್ಮಳ ಪುತ್ಥಳಿ ಎದುರಿಗೆ ಹಿಂದುಳಿದ ಪ್ರದೇಶ, ಗದಗ ರಾಜೀವ ಗಾಂಧಿ ನಗರದಲ್ಲಿ ಹಾಗೂ ಬೆಟಗೇರಿಯ ಬಿ.ಬಿ. ಬಣ್ಣದ ನಗರದಲ್ಲಿ ರವಿವಾರ ಏಕಕಾಲದಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೆ ತಜ್ಞ ವೈದ್ಯರ ತಂಡ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೂರು ತಂಡಗಳು ಕಾರ್ಯಾಚರಣೆ ನಡೆಸಿದವು.

ರಾಜೀವ ಗಾಂಧಿ ನಗರದ ಗದಗ ಜಿಲ್ಲಾ ಗೊಂಧಳಿ ಸಮಾಜ ಸಭಾ ಭವನದಲ್ಲಿ ಡಾ. ಉಮೇಶ ಹಾದಿ, ಡಾ. ಅಂಕುಶ ಕೆ.ಎಸ್, ಡಾ. ವಿಶ್ವನಾಥ ದಂಡಿನ, ಡಾ. ಸಂಕೇತ, ಡಾ.ಸೃಜನ್ ಅವರ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಾದ ಸಹನಾ ಬಾವಿಕಟ್ಟಿ, ಶ್ರೀಲಕ್ಷ್ಮಿ ಕುಲಕರ್ಣಿ, ಸಹನಾ ಹಿರೇಮಠ, ಎ.ಎಸ್. ಮಾನಸಾ, ಅಂಕಿತಾ ಕಣನ್, ಶಿವನಗೌಡ್ರ ಈ ಭಾಗದ ಜನರ ಆರೋಗ್ಯವನ್ನು ತಪಾಸಣೆ ನಡೆಸಿದರು.

ಶಿಬಿರದ ಯಶಸ್ವಿಗೆ ನಗರ ಸಂಘ ಚಾಲಕರಾದ ಬಸವರಾಜ ನಾಗಲಾಪೂರ, ಸೇವಾಭಾರತಿ ಪ್ರಕಲ್ಪದ ಶಶಿಕುಮಾರ ಕುರ್ತಕೋಟಿ, ಯಲ್ಲಪ್ಪ ಕುಂಬಾರ, ರಾಕೇಶ್, ಶಶಿಕುಮಾರ, ರಾಜಕುಮಾರ ಮುಂತಾದವರು ಶ್ರಮಿಸಿದರು.

ನಗರ ಸೇವಾ ಪ್ರಮುಖ ಬಸವರಾಜ ಪಟ್ಟಣಶೆಟ್ಟಿ, ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಯ ಕಾರ್ಯದರ್ಶಿ ರಾಜೇಶ ಖಟವಟೆ, ಅರುಣೋದಯ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ, ಕಾರ್ಯದರ್ಶಿ ಜಯರಾಜ ಮುಳಗುಂದ, ಮಂಜು ಕಾಟವಾ, ಕೀರ್ತಿ ಕಾಂಬಳೇಕರ, ಆಕಾಶ ಗುಜ್ಜರ, ರಾಘವೇಂದ್ರ ಕಾಟವಾ ಶಿಬಿರದ ಯಶಸ್ವಿಗೆ ಶ್ರಮಿಸಿದರು.

ಬೆಟಗೇರಿಯ ಬಿ.ಬಿ. ಬಣ್ಣದ ನಗರದ ಸರಕಾರಿ ಕ.ಗಂ.ಮ.ಶಾ. ನಂ. 11ರಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಡಾ. ಪ್ರಕಾಶ ಹೊಸಮನಿ, ಡಾ. ರಾಜು, ಡಾ. ಸತ್ಯ ಡಿ, ಡಾ. ಶ್ರೀಹರಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಾದ ನಿತ್ಯಾ ಭಟ್, ಶ್ವೇತಾ, ಸಂಗಮೇಶ್ವರಿ, ಸುಚಿತ್ರಾ, ಮನಿಶಾ, ರಕ್ಷಿತಾ ಆರೋಗ್ಯ ತಪಾಸಣೆ ನಡೆಸಿದರು.

ನಗರದ ಸಹ ಸಂಘ ಚಾಲಕ ನರಸಿಂಹ ಕಾಮಾರ್ತಿ, ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ, ಮಾಜಿ ಅಧ್ಯಕ್ಷ ಮಂಜುನಾಥ ಚನ್ನಪ್ಪನವರ, ನಗರಸಭಾ ಸದಸ್ಯ ಮಾಧುಸಾ ಮೇರವಾಡೆ, ಲಲಿತಾಬಾಯಿ ಮೇರವಾಡೆ, ವಿರುಪಾಕ್ಷಪ್ಪ ಐಲಿ, ಪ್ರಮೋದ ಹಿರೇಮಠ ಶಿಬಿರದ ಯಶಸ್ವಿಗೆ ಶ್ರಮಿಸಿದರು ಎಂದು ನರಸಿಂಹ ಕಾಮಾರ್ತಿ ತಿಳಿಸಿದ್ದಾರೆ.

ಗದಗ ಮುಳಗುಂದ ನಾಕಾ ಬಳಿ ಇರುವ ವೀರರಾಣಿ ಕಿತ್ತೂರ ಚನ್ನಮ್ಮ ಸರ್ಕಲ್ ಬಳಿ ಇರುವ ಹಿಂದುಳಿದ ಪ್ರದೇಶದ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಡಾ. ವಿನಯಕುಮಾರ ತೆರದಾಳ, ಡಾ. ಪ್ರಜ್ವಲ ಡಾ. ಯೋಗಿತ, ಡಾ. ರಾಘವೇಂದ್ರ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಾದ ಶ್ರೀವತ್ಸ, ಸ್ಪೂರ್ತಿ ಎಚ್, ಗುತ್ತೆಮ್ಮ, ಪ್ರತಿಭಾ, ಸ್ಪೂರ್ತಿರಾಮ್, ಪ್ರೇಮಾ ಜನರ ಆರೋಗ್ಯವನ್ನು ತಪಾಸಣೆ ನಡೆಸಿದರು.


Spread the love

LEAVE A REPLY

Please enter your comment!
Please enter your name here