ಉತ್ತರ ಪ್ರದೇಶ:- ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಬಹಳ ಕ್ರೂರವಾಗಿ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಗುಪ್ತಾಂಗದೊಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿ ಥಳಿಸಿ ಕೊಂದಿದ್ದಾನೆ. ಆರೋಪಿ ಪತಿ ತನ್ನ ಸಹೋದರರೊಂದಿಗೆ ಸೇರಿ ಪತ್ನಿಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ.
ಮಹಿಳೆಯ ಖಾಸಗಿ ಭಾಗಗಳ ಒಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಹಲ್ಲೆಯಿಂದಾಗಿ ಆಕೆಯ ದೇಹದಾದ್ಯಂತ ಅನೇಕ ಗಾಯಗಳ ಗುರುತುಗಳು ಸಹ ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಲಟ್ಟಣಿಗೆ ಮಹಿಳೆಯ ಕರುಳಿನವರೆಗೂ ತಲುಪಿ ಹಾನಿಗೊಳಿಸಿದ್ದರಿಂದ ಆಕೆ ಸಾವನಪ್ಪಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ
ಆರೋಪಿ ಪತಿಯನ್ನು ಸುರ್ಜೀತ್ ಎಂದು ಗುರುತಿಸಲಾಗಿದ್ದು, ಸೋಮವಾರ (ಆಗಸ್ಟ್ 5)ರಂದು ರಾತ್ರಿ ತನ್ನ 28 ವರ್ಷದ ಪತ್ನಿ ರೇಷ್ಮಾ ಅವರೊಂದಿಗೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಮೊದಲು ರೇಷ್ಮಾಳನ್ನು ಕಟ್ಟಿಹಾಕಿ ತನ್ನ ಸಹೋದರರೊಂದಿಗೆ ಮನೆಯಲ್ಲಿ ಥಳಿಸಿದ್ದಾನೆ.
ಇದರಿಂದ ಆಕೆ ಸಾವನಪ್ಪಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಆತನ ಘೋರ ಕೃತ್ಯ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ತನ್ನ ಹೆಂಡತಿಯ ಖಾಸಗಿ ಭಾಗಗಳಿಗೆ ಲಟ್ಟಣಿಗೆ ಹಾಕಿ ಚಿತ್ರಹಿಂಸೆ ನೀಡಿ ಅವಳನ್ನು ಕಚ್ಚಿ ಮತ್ತು ಬೆಲ್ಟ್‌ನಿಂದ ಹೊಡೆದು ಕೊಂದಿದ್ದಾನೆ ಎಂಬುದು ತಿಳಿದು ಬಂದಿದೆ.
ಆರೋಪಿ ಸುರ್ಜೀತ್ 10 ವರ್ಷಗಳ ಹಿಂದೆ ಸಂತ್ರಸ್ತೆ ರೇಷ್ಮಾಳನ್ನು ಮದುವೆಯಾಗಿದ್ದ. ಅವರು ಆಗಾಗ ಜಗಳವಾಡುತ್ತಿದ್ದರು. ಆದರೆ, ಸೋಮವಾರ ರಾತ್ರಿ, ಸುರ್ಜೀತ್ ಕುಡಿದ ಅಮಲಿನಲ್ಲಿ ಮನೆಗೆ ಬಂದು ತನ್ನ ಪತ್ನಿ ರೇಷ್ಮಾಳೊಂದಿಗೆ ಜಗಳವಾಡಿ, ನಂತರ ಆಕೆಯನ್ನು ಥಳಿಸಿ ಚಿತ್ರಹಿಂಸೆ ನೀಡುವ ಮೂಲಕ ಇಂತಹ ಘೋರ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.