8 ತಿಂಗಳ ಮಗುವನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ಬಿಟ್ಟು ಹೋದ ಪಾಪಿ ತಾಯಿ!

0
Spread the love

ವಿಜಯಪುರ:- ನಿರ್ಮಾಣ ಹಂತದ ಕಟ್ಟಡದ ಕಾಂಪೌಂಡ್​ನಲ್ಲಿಂದು ಸುಮಾರು 8 ತಿಂಗಳು ಹೆಣ್ಣು ಮಗು ಪತ್ತೆಯಾಗಿರುವ ಘಟನೆ ನಗರದ ಪದ್ಮಾವತಿ ಕಾಲೋನಿ 2 ರಲ್ಲಿ ನಿರ್ಮಾಣ ಹಂತದಲ್ಲಿ ನಡೆದಿದೆ.

Advertisement

ಹಂತದ ಕಟ್ಟಡ ಕಾಂಪೌಂಡ್​ನಲ್ಲಿ ಹೆಣ್ಣು ಮಗು ಇರುವುದನ್ನು ಕಂಡಿದ್ದಾರೆ.

ಸುತ್ತಮುತ್ತಲಿನ ಜನರನ್ನು ವಿಚಾರಿಸಿದ ಬಳಿಕ ಸಂತೋಷ್​, ಕಟ್ಟಡದ ಮಾಲೀಕ ಕೃಷ್ಣಪ್ಪ ಬಡಿಗೇರಗೆ ಮಾಹಿತಿ ನೀಡಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ಕಾಂಪೌಂಡ್​ನಲ್ಲಿ ಹೆಣ್ಣು ಮಗು ಸಿಕ್ಕ ವಿಚಾರ ತಿಳಿಯುತ್ತಿದಂತೆ ಸ್ಥಳೀಯರೆಲ್ಲರೂ ನೆರೆದಿದ್ದರು. ಅಳುತ್ತಿದ್ದ ಮಗುವನ್ನು ಸಂತೈಸಿ ಹಾಲುಣಿಸಿದ್ದಾರೆ. ಬಳಿಕ ಕೃಷ್ಣಪ್ಪ, ಆದರ್ಶ ನಗರ ಪೊಲೀಸರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಆದರ್ಶನಗರ ಪೊಲೀಸರು, ಪರಿಶೀಲನೆ ಮಾಡಿ ಅಂಬ್ಯುಲೆನ್ಸ್ ಮೂಲಕ ಮಗುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here