ಕಲಬುರಗಿ :- ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಪಿ ಪುತ್ರ ಬಸವರಾಜ್ ಆರೋಪಿಯಾಗಿದ್ದು, ತನ್ನ ತಾಯಿ ರತ್ನಾಬಾಯಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ರಾಘವೇಂದ್ರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ದೇವರ ಹೆಸರಲ್ಲಿ ಭವಿಷ್ಯ ಹೇಳ್ತಾ ಜೀವನ ಮಾಡ್ತಿದ್ದ ರತ್ನಾಬಾಯಿ ಕೆಲ ದಿನಗಳ ಹಿಂದಷ್ಟೇ ಕೊಲೆಯಾಗಿದ್ಲು. ಪ್ರಕರಣದ ಬೆನ್ನತ್ತಿದ ಪೋಲೀಸರು ವೃದ್ಧೆಯ ಮಗ ಹಾಗು ಕೊಲೆಗೆ ಸಹಕಾರ ನೀಡಿದ ಶರ್ಫುದ್ದೀನ್ ಇಬ್ಬರನ್ನು ಬಂಧಿಸಿದ್ದಾರೆ.