ಕೊಡಗು:- ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಚಾಕುವಿನಿಂದ ಇರಿದು ಪತ್ನಿ ಕೊಲೆಗೈದಿರುವ ಘಟನೆ ಕೊಡಗಿನ ಮೂರ್ನಾಡು ಗಾಂಧಿನಗರದಲ್ಲಿ ಜರುಗಿದೆ.
Advertisement
26 ವರ್ಷದ ಧರ್ಮ ಪತ್ನಿಯಿಂದ ಹತ್ಯೆಯಾದ ದುರ್ಧೈವಿ ಎನ್ನಲಾಗಿದೆ. ಕಳೆದ 10 ತಿಂಗಳ ಹಿಂದೆ ಈ ದಂಪತಿ ಪ್ರೀತಿಸಿ ಮದುವೆ ಆಗಿದ್ದರು. ಆದರೂ ಇಬ್ಬರ ನಡುವೆ ಆಗಾಗ ಜಗಳ ಉಂಟಾಗುತ್ತಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಪತಿಗೆ ಚಾಕುವಿನಿಂದ ಇರಿದು ಪತ್ನಿ ಕೊಲೆ ಮಾಡಿದ್ದಾಳೆ.
ಘಟನೆ ಹಿನ್ನೆಲೆ 24 ವರ್ಷದ ಪತ್ನಿ ಶ್ರೀಜಾ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.
ಘಟನೆ ಸಂಬಂಧ ಮೂರ್ನಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.