ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಹಾಗೂ ಪೋಷಕರನ್ನು ತೊರೆದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಕುಟುಂಬಸ್ಥರ ವಿರೋದದ ನಡುವೆಯೂ ಪೃಥ್ವೀ ಭಟ್ ಝೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಪ್ರೀತಿಸಿ ಪ್ರೇಮ ವಿವಾಹವಾಗಿದ್ದು ಸದ್ಯ ಗಾಯಕಿಯ ತಂದೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಾಯಕಿ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ನನ್ನ ಮಗಳು ಕಳೆದ 20ನೇ ತಾರೀಖಿನಂದು ದೇವಾಸ್ಥಾನದಲ್ಲಿ ಯಾರನ್ನೋ ಮದುವೆ ಆಗಿದ್ದಾರೆ. ನಮ್ಮನ್ನು ಬಿಟ್ಟು ಹೋಗಿದ್ದು ಈಗ ನಮ್ಮ ಸಂಪರ್ಕದಲ್ಲಿ ಇಲ್ಲ. ಕನ್ನಡ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಅಭಿಷೇಕ್ ಎನ್ನುವನ ಜೊತೆ ಮದುವೆ ಆಗಿದ್ದಾರೆ. ಅಭಿಷೇಕ್ ಹವ್ಯಕನೂ ಅಲ್ಲ, ಬ್ರಾಹ್ಮಣನೂ ಅಲ್ಲ. ಜಾತಿ ಯಾವುದಾದರೇನು, ಅವಳು ನಮ್ಮನ್ನು ಬಿಟ್ಟು ಹೋದ ಮೇಲೆ ಜಾತಿ ಕಟ್ಟಿಕೊಂಡು ಮಾಡೋದು ಏನಿಲ್ಲ ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ಇದು ಯಾರೂ ನಿರೀಕ್ಷೆ ಮಾಡುವಂತ ಸಮಯವೇ ಅಲ್ಲ. ನಮ್ಮನ್ನು ಬಿಟ್ಟು ಹೋಗಿ 20 ಆಗಿ ಮರೆತು ಹೋಗಿದ್ದಾರೆ. ಮಗಳನ್ನು ಯಾವ ರೀತಿ ಬೆಳೆಸಿದ್ದೇವು ಅಂತ ನಿಮಗೆಲ್ಲಾ ಗೊತ್ತಿರಬಹುದು. ಪೃಥ್ವಿ ಭಟ್ಳನ್ನು ಮದುವೆ ಮಾಡಿ ಕೊಟ್ಟಿದ್ದು ಗಿರಿನಗರದ ಭಯಂಕರ ಸಂಗೀತ ಶಿಕ್ಷಕ ಮಹಾದುಷ್ಟ ನರಹರಿ ದೀಕ್ಷಿತ್. ಇವನು ಬೇರೆ ಬೇರೆ ಕಡೆ ಕ್ಲಾಸ್ಗಳನ್ನು ಮಾಡುತ್ತಾನೆ. ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಮಾಡಿದ್ದಾನೆ. ಇವನು ಮಾರ್ಚ್ 7 ರಂದು ನಾನೇ ಮನೆಗೆ ಕರೆಸಿದ್ದೇ. ಹವ್ಯಕ ಸಮುದಾಯದಲ್ಲಿ ಯಾರದರೂ ವರನಿದ್ರೆ ಹೇಳಿ, ಮಗಳಿಗೆ ಮದುವೆ ಮಾಡಬೇಕಾಗಿದೆ ಎಂದು ಅವನಿಗೆ ಹೇಳಿದ್ದೆ.
ಕನ್ನಡವಾಹಿನಿಯ ಅಭಿಷೇಕ್ ಎನ್ನುವ ಹುಡುಗ ಪೃಥ್ವಿ ಹಿಂದೆ ಬಿದ್ದು ಇಷ್ಟ ಪಡುತ್ತಿದ್ದಾನೆ. ಪರಿಸ್ಥಿತಿ ಕೈಮಿರಿದೆ, ಮದುವೆ ಹಂತಕ್ಕೆ ಬಂದಿದೆ ಎನ್ನುವುದೂ ಯಾವುದು ಹೇಳಿಲ್ಲ. ನರಹರಿ ದೀಕ್ಷಿತ್ ಹೋದ ಮೇಲೆ ಪೃಥ್ವಿ ಬಳಿ ವಿಚಾರಿಸಿದೆ. ಆಗ ನನ್ನನ್ನು ಅವನು ಇಷ್ಟ ಪಡುತ್ತಿದ್ದಾನೆ. ನೀವು ಒಪ್ಪಿದ್ರೆ ಓಕೆ, ಇಲ್ಲ, ಇಷ್ಟ ಇಲ್ಲ ಅಂದ್ರೆ ನನಗೆ ಬೇಡ. ದೇವರ ಮುಂದೆ ಪ್ರಮಾಣ ಮಾಡಿ, ನನ್ನ ತಲೆ ಮುಟ್ಟಿ ನೀವು ಹೇಳಿದ ಹುಡುಗನನ್ನೇ ಮದುವೆ ಆಗೋದಾಗಿ ಮಗಳು ಹೇಳಿದ್ದಳು ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ನರಹರಿ ದೀಕ್ಷಿತ್ ಬಂದು ಹೋದ ಮೇಲೆ ಮಗಳು ವಶೀಕರಣಕ್ಕೆ ಒಳಗಾದ ರೀತಿಯಲ್ಲಿ ಇದ್ದಳು. ಈ ಬಗ್ಗೆ ನಾನು ಯೋಚನೆ ಮಾಡಬೇಕಿತ್ತು. ಆದರೆ ನನ್ನಕಡೆಯಿಂದ ತಪ್ಪಾಗಿದೆ. 27ನೇ ತಾರೀಖು ಸ್ಟೂಡಿಯೋದಲ್ಲಿ ಶೂಟಿಂಗ್ ಇದೆ ಎಂದು ಹೇಳಿದ್ದರಿಂದ ನಾನೇ ಅಲ್ಲಿಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನ 3 ಗಂಟೆಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಿಂದ ನನಗೆ ಫೋನ್ ಬಂತು. ಮದುವೆ ಆಗಿದ್ದಾರೆ ಎಂದು ಹೇಳಿದರು. ಆವಾಗ ನಾನು ಮನೆಗೆ ಬರುವುದು ಬೇಡವೇ ಬೇಡ ಎಂದು ಫೋನ್ನಲ್ಲೇ ಹೇಳಿದೆ ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಇದಾದ ಮೇಲೆ ಒಂದೆರಡು ಬಾರಿ ಫೋನ್ ಮಾಡಿ ಸ್ವಾರಿ ಅಪ್ಪ, ಅಮ್ಮ.. ಸ್ವಾರಿ ಅಪ್ಪ, ಅಮ್ಮ ಫೋನ್ ಮಾಡಿದ್ದಳು. ಇದಾದ ಮರುದಿನ ಅಕ್ಕನ ಮಗ ಫೋನ್ ಮಾಡಿದಾಗ ಪೃಥ್ವಿ ಭಟ್ ಹೇಳಿದ್ದಾಳಂತೆ. ನನ್ನನ್ನು ಧಾರೆ ಎರದಿದ್ದು ನರಹರಿ ದೀಕ್ಷಿತ್ ಎಂದು ಹೇಳಿದ್ದಾರೆ. ಇದು ಗೊತ್ತಾಗಿ ನನಗೆ ಭಯಂಕರ ಆಘಾತವಾಯಿತು. ಹವ್ಯಕ ಸಮಾಜದಲ್ಲೇ ಇದ್ದು ನರಹರಿ ದೀಕ್ಷಿತ್ ಈ ರೀತಿ ಮಾಡಿದ್ದಾನೆ. ಯಾವುದೋ ಲಾಭಕ್ಕೆ ಹೀಗೆ ಮಾಡಿದ್ದಾನೆ. ನಮ್ಮ ಜೀವಮಾನದಲ್ಲಿ ಒಂದೇ ಒಂದು ಧಾರೆ ಎರೆದು ಕೊಡುವಂತದ್ದನ್ನ ಅವನು ಕಿತ್ತು ಕೊಂಡ ಎಂದು ಹೇಳಿದ್ದಾರೆ.