ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಖ್ಯಾತ ಗಾಯಕಿ, ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಹಲವು ವರ್ಷಗಳಿಂದ ಇಬ್ಬರು ಪರಿಚಿತರಾಗಿದ್ದು ಆ ಬಳಿಕ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಒಂದೇ ವೇದಿಕೆಯಲ್ಲಿ ಇಬ್ಬರು ಹಲವು ಕಾರ್ಯಕ್ರಮಗಳನ್ನು ನೀಡಿದ್ದರು. ಟಗರು, ಡಾರ್ಲಿಂಗ್, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಇದೀಗ ಇಬ್ಬರು ಮುಂದಿನ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ವಿವಾಹ ಸಮಾರಂಭ ನೆರವೇರಲಿದೆ.
ಹೊಸ ಆರಂಭವು ಆಳವಾದ ನೆಲೆಯನ್ನು ನೀಡುತ್ತದೆ. ಸತ್ಯ ಹೇಳಬೇಕು ಅಂದರೆ ಇದು ಬರುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೆ. ಆದರೆ ಜೀವನ ಬೇರೆಯದ್ದೇ ಪ್ಲಾನ್ ಹೊಂದಿತ್ತು. ನಮ್ಮಿಬ್ಬರ ಬಲವಾದ ಸ್ನೇಹ ಸ್ವಾಭಾವಿಕವಾಗಿ ಪ್ರೀತಿ, ಒಡನಾಟವಾಗಿ ವಿಕಸನಗೊಂಡಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ವಾರಿಜಶ್ರೀ ಪೋಷಕರ ಆಶೀರ್ವಾದದೊಂದಿಗೆ ಜೀವನದ ಈ ಹೊಸ ಅಧ್ಯಾಯ ಒಟ್ಟಿಗೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ ಅಂತಾ ಮಾಧ್ಯಮವೊಂದು ವರದಿ ಮಾಡಿದೆ.
ಈ ಹಿಂದೆ ರಘು ದೀಕ್ಷಿತ್, ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಆಗಿದ್ದ ಮಯೂರಿ ಉಪಾಧ್ಯ ರನ್ನು ಮದುವೆ ಆಗಿದ್ದರು. ಆದರೆ ಇಬ್ಬರ ನಡುವೆ ಹೊಂದಾಣಿಕೆ ಸರಿ ಬಾರದ ಕಾರಣ 2019ರಲ್ಲಿ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದಾರೆ.