ನೈಜ ಘಟನೆ ಆಧಾರಿತ `ಸಿಂಹರೂಪಿಣಿ’ ಚಲನಚಿತ್ರ ನ. ೨೯ರಂದು ಉತ್ತರ ಕರ್ನಾಟಕ ಭಾಗದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ, ಸಾಹಿತಿ ಕಿನ್ನಾಳ ರಾಜ್ ಹೇಳಿದರು.
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಾರಮ್ಮದೇವಿಗೆ ಬಲಿ ಕೊಡುವ ಕಥೆಯನ್ನು ಹೊಂದಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದೆ. ಚಿತ್ರದ ಎರಡನೆ ಭಾಗದಲ್ಲಿ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ವಿಶಿಷ್ಟವಾಗಿ ಕಟ್ಟಿಕೊಡಲಾಗಿದೆ. ಚಿತ್ರ ಈಗಾಗಲೇ ಬೆಂಗಳೂರು ಭಾಗದಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ 29ರಂದು ಉತ್ತರ ಕರ್ನಾಟಕ ಭಾಗದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಈ ಸಿನಿಮಾದಲ್ಲಿ ಗದಗ ಬೆಟಗೇರಿ ಮೂಲದ ಬಾಲಪ್ರತಿಭೆ ಸಾಯಿಸಮೀಕ್ಷಾ ಅಭಿನಯಿಸಿದ್ದಾರೆ. ೪೫ಕ್ಕೂ ಹೆಚ್ಚು ದೊಡ್ಡ ನಟರ ದಂಡು ಚಿತ್ರದಲ್ಲಿದೆ. ಅದರ ಜೊತೆಗೆ ಸ್ಥಳೀಯ ಕಲಾವಿದರೂ ಇದ್ದಾರೆ. ಚಿತ್ರದ ಚಿತ್ರೀಕರಣ ದೊಡ್ಡಬಳ್ಳಾಪುರ ಸಮೀಪ ನಡೆದಿದ್ದು, ಉತ್ತರ ಕರ್ನಾಟಕದ ಜನ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ಯಾದಿಗೊಪ್ಪ, ಮಂಜುನಾಥ ದಾಮೋದರ, ಚಂದ್ರಪ್ಪ ಚಂದ್ರಶೇಖರ, ಬಾಲನಟಿ ಸಾಯಿಸಮೀಕ್ಷಾ, ಶ್ರೀದೇವಿ ಬಂಡಾ, ರಾಜು ಲಕ್ಷೆ ಲಕ್ಷೆö್ಮÃಶ್ವರಮಠ ಉಪಸ್ಥಿತರಿದ್ದರು.