ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಕನ್ನಡ ಚಿತ್ರ ಸಿಂಹರೂಪಿಣಿ ಈಗ ಗದಗ, ಮುಂಡರಗಿ, ಮುಧೋಳದಲ್ಲಿ ಬಿಡುಗಡೆಯಾಗುತ್ತಿದೆ.
ಗದುಗಿನ ಕೃಷ್ಣಾ ಚಿತ್ರಮಂದಿರಕ್ಕೆ (ಮಧ್ಯಾಹ್ನ 12 ಗಂಟೆಗೆ) ಹಾಗೂ ಮುಂಡರಗಿಯ ಚೋಟು ಮಹಾರಾಜ ಶ್ರೀ ಸಿನಿಮಾಸ್ ಚಿತ್ರಮಂದಿರಕ್ಕೆ (ಸಂಜೆ 3 ಗಂಟೆಗೆ) ಚಿತ್ರದ ಕಲಾವಿದರಾದ ನೀನಾಸಂ ಅಶ್ವತ್, ಡಿ.ಕೆ.ಡಿ. ನವಾಜ್, ವಿಜಯ ಚಂಡೂರ, ಸಾಗರ ಲೋಹಿತ್, ಮಲ್ಲಿಕಾರ್ಜುನ, ನಿರ್ದೇಶಕರಾದ ಕಿನ್ನಾಳ ರಾಜ್, ನಿರ್ಮಾಪಕರಾದ ಕೆ.ಎಂ. ನಂಜುAಡೇಶ್ವರ ಶುಕ್ರವಾರ ಭೇಟಿ ನೀಡಲಿದ್ದಾರೆ.
ಈ ಚಿತ್ರದಲ್ಲಿ ಗದಗ-ಬೆಟಗೇರಿ ಬಾಲಕಲಾವಿದೆ ಸಾಯಿಸಮೀಕ್ಷಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಗದಗ ಜಿಲ್ಲೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಚಿತ್ರವನ್ನು ಯಶಸ್ವಿಗೊಳಿಸಬೇಕೆಂದು ಚಿತ್ರತಂಡದವರು ಮನವಿ ಮಾಡಿಕೊಂಡಿದ್ದಾರೆ.



