ಮಾತು ಆರಂಭಿಸಿದ ‘ಸಿಂಹರೂಪಿಣಿ’ ಭಕ್ತಿ ಪ್ರಧಾನ ಚಲನಚಿತ್ರ

0
cinema suddi
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಭಕ್ತಿ ಪ್ರಧಾನ ಚಲನಚಿತ್ರ ‘ಸಿಂಹರೂಪಿಣಿ’ ಅದ್ದೂರಿ ಗ್ರಾಫಿಕ್ಸ್ನೊಂದಿಗೆ ತೆರೆಗೆ ಬರಲು ಸದ್ದಿಲ್ಲದೆ ಸಿದ್ಧವಾಗುತ್ತಿದೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ, ಈಗ ಮಾತಿನ ಮರುಲೇಪನ ಕಾರ್ಯವನ್ನು ಲೂಪ್ ಸ್ಟುಡಿಯೋದಲ್ಲಿ ಆರಂಭಿಸಿದೆ.

Advertisement

ಕೆಜಿಎಫ್, ಸಲಾರ್ ಚಿತ್ರಗಳ ಖ್ಯಾತ ಸಾಹಿತಿ ಕಿನ್ನಾಳ ರಾಜ್ ಅವರು ನಿರ್ದೇಶನ ಮಾಡುತ್ತಿದ್ದು, ಕೆ.ಎಂ ನಂಜುಂಡೇಶ್ವರ ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬರುವ ತಿಂಗಳು ಚಿತ್ರದ ಮೊದಲ ನೋಟ (ಫಸ್ಟ್ ಲುಕ್) ಬಿಡುಗಡೆಗೆ ಆಗಲಿದ್ದು, ಇದು ಶ್ರೀ ಮಾರಮ್ಮ ದೇವಿಯ ಕುರಿತಾದ ಚಿತ್ರವಾಗಿದೆ.

ಚಿತ್ರದಲ್ಲಿ ಮಾರಮ್ಮ ದೇವಿಯಾಗಿ ನಟಿ ಯಶಸ್ವಿನಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರೂಪಕಿ ಅಂಕಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಯಶ್ ಶೆಟ್ಟಿ, ಪುನೀತ್ ರುದ್ರನಾಗ್, ದಿವ್ಯಾ ಆಲೂರು, ತೆಲುಗಿನ ಹಿರಿಯ ನಟರಾದ ಸುಮನ್, ತಮಿಳು ನಟ ದಿನಾ, ಹರೀಶ್ ರಾಯ್, ನೀನಾಸಂ ಅಶ್ವಥ್, ತಬಲಾ ನಾಣಿ, ದಿನೇಶ್ ಮಂಗಳೂರು, ಭಜರಂಗಿ ಪ್ರಸನ್ನ ಅವರಂತಹ ಕಲಾವಿದರ ಜೊತೆ ಸಾಗರ್, ವಿಜಯ್ ಚಂಡೂರ್, ವರ್ಧನ್ ತೀರ್ಥಹಳ್ಳಿ, ಮನಮೋಹನ ರೈ, ನವಾಜ್, ಲೋಹಿತ್, ಪಿಳ್ಳಪ್ಪ, ಉಮೇಶಣ್ಣ, ವಿಜಯ್ ಬಸ್ರೂರು, ಸುನಂದಾ ಕಲ್ಬುರ್ಗಿ, ವೇದಾ ಹಾಸನ್, ರಾಧಾ ರಾಮಚಂದ್ರ, ಗುರುಮೂರ್ತಿ, ವೈಭವ್ ನಾಗರಾಜ, ಶಶಿಕುಮಾರ, ಯುವರಾಜ್ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಸಂಗೀತ ಆಕಾಶ ಪರ್ವ, ಛಾಯಾಗ್ರಹಣ ಕಿರಣ್ ಕುಮಾರ್, ಸಂಕಲನ ವೆಂಕಿ ಯುಡಿವಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಬಾಲಸುಬ್ರಹ್ಮಣ್ಯಂ ಅವರು ಕಾರ್ಯ ನಿರ್ವಹಿಸಿದ್ದಾರೆ. ಪತ್ರಿಕಾ ಸಂಪರ್ಕ ಆರ್ ಚಂದ್ರಶೇಖರ್. ಮತ್ತು ಡಾ. ಪ್ರಭು ಗಂಜಿಹಾಳ್, ಡಾ. ವೀರೇಶ್ ಹಂಡಿಗಿ ಅವರದ್ದಾಗಿದೆ. ರಾಜಶೇಖರ್, ಮಲ್ಲಿಕ್, ನಿತ್ಯ ದಿನೇಶ್, ತೇಜಸ್ ನಿರ್ದೇಶನ ತಂಡದಲ್ಲಿದ್ದಾರೆ.


Spread the love

LEAVE A REPLY

Please enter your comment!
Please enter your name here