ಗುವಾಹಟಿ:- ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಬಿಟ್ಟ 6 ಆರೋಪಿಗಳನ್ನು ಅಸ್ಸಾಂನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು, ಸಾರ್ವಜನಿಕ ಸ್ಥಳದಲ್ಲೇ ಹಸು ಕೊಂದು ಕೃತ್ಯದ ವೀಡಿಯೋ ಹರಿಬಿಟ್ಟಿದ್ದರು. ಇದರ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಆರೋಪಿಗಳು, ಪ್ರಕರಣ ದಾಖಲಿಸಿಕೊಂಡು 6 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸಾಹಿಲ್ ಖಾನ್ (20), ಹಫೀಜುರ್ ಇಸ್ಲಾಂ (19), ರೋಕಿಬುಲ್ ಹುಸೇನ್ (20), ಸಾಹಿದುಲ್ ಇಸ್ಲಾಂ (30), ಇಜಾಜ್ ಖಾನ್ (26), ಜಹಿದುಲ್ ಇಸ್ಲಾಂ (24) ಎಂದು ಗುರುತಿಸಲಾಗಿದೆ.
ವೀಡಿಯೋದಲ್ಲಿ, ಆರೋಪಿಗಳು ದೊಡ್ಡ ಚಾಕುಗಳನ್ನು ಹರಿತಗೊಳಿಸುವುದು, ಅಡುಗೆ ಪಾತ್ರೆಗಳನ್ನು ಹೊತ್ತುಕೊಂಡು ದೋಣಿಗೆ ಹಸುವನ್ನು ಹತ್ತಿಸಿಕೊಳ್ಳುವುದನ್ನು ಕಾಣಬಹುದು. ಆ ವೀಡಿಯೋದ ಇನ್ನೊಂದು ಭಾಗದಲ್ಲಿ, ಅವರು ಪ್ರಾಣಿಯನ್ನು ಕತ್ತರಿಸಿ ನಂತರ ಅಡುಗೆ ಮಾಡುವುದನ್ನು ತೋರಿಸಲಾಗಿದೆ. ಈ ವೀಡಿಯೋ, ಗೋವುಗಳನ್ನು ಪವಿತ್ರವೆಂದು ಪರಿಗಣಿಸುವ ಹಿಂದೂ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.