Waqf Board: ಸರ್‌ ಎಂ. ವಿಶ್ವೇಶ್ವರಯ್ಯ ಓದಿದ ಶಾಲೆ ಮೇಲೂ ವಕ್ಫ್‌ ಕಣ್ಣು!

0
Spread the love

ಚಿಕ್ಕಬಳ್ಳಾಪುರ: ವಕ್ಫ್‌ ಅವಾಂತರಕ್ಕೆ ಜನಾಕ್ರೋಶ ಭುಗಿಲೆದ್ದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ವಕ್ಫ್ ನೋಟಿಸ್ ಹಿಂಪಡೆಯುವಂತೆ ಖಡಕ್ ಸೂಚನೆ ನೀಡಿದ್ದರು. ಇಷ್ಟಾದರೂ ವಕ್ಫ್‌ನಿಂದ ಆಗಿರೋ ಅವಾಂತರ ನಿಂತಿಲ್ಲ. ಇದರ ನಡುವೆಯೇ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ಈಗ ವಕ್ಫ್​​ ಮಂಡಳಿಗೆ ಸೇರಿಸಲಾಗಿದೆ.

Advertisement

ಹೌದು ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಓದಿದ ಸರ್ಕಾರಿ ಶಾಲೆ ಇದೆ. ಗ್ರಾಮದ ಸರ್ವೆ ನಂಬರ್​ 1 ರಲ್ಲಿ 19 ಗುಂಟೆ ಜಮೀನು ಇದೆ. ಈ ಜಮೀನಿನಲ್ಲೇ ನೂರಾರು ವರ್ಷಗಳಿಂದ ಶಾಲೆ ಇದೆ. ಆದರೆ 2018ರಿಂದ ಇತ್ತಿಚಿಗೆ ವಕ್ಫ್​ ಆಸ್ತಿ ಎಂದು ನಮೂದಿಸಲಾಗಿದೆ.

ದಾವೂದ್ ಷಾ ವಲ್ಲೀ ದರ್ಗಾ ಸುನ್ನಿ ವಕ್ಫ್​ ಆಸ್ತಿ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ವಕ್ಫ್​ ಆಸ್ತಿಗೆ ಸಂಬಂಧಪಟ್ಟಿಲ್ಲವಾದರೂ ಪಹಣಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಸದ್ಯ ವಕ್ಫ್​ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದಾಖಲೆ ಸರಿಪಡಿಸುವಂತೆ ಒತ್ತಾಯಿಸಲಾಗಿದೆ. ಕಂದಾಯ ಹಾಗೂ ವಕ್ಫ್​ ಅಧಿಕಾರಿಗಳ ವಿರುದ್ಧ ‌ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

 


Spread the love

LEAVE A REPLY

Please enter your comment!
Please enter your name here