HomeSports Newsಲಯಕ್ಕೆ ಮರಳಿದ ಸಿರಾಜ್: 87 ಎಸೆತಗಳಲ್ಲಿ ಸೊನ್ನೆ ರನ್! Wow ಎಂಥಾ ಬೌಲಿಂಗ್!

ಲಯಕ್ಕೆ ಮರಳಿದ ಸಿರಾಜ್: 87 ಎಸೆತಗಳಲ್ಲಿ ಸೊನ್ನೆ ರನ್! Wow ಎಂಥಾ ಬೌಲಿಂಗ್!

For Dai;y Updates Join Our whatsapp Group

Spread the love

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್​ರನ್ನು ಚಾಂಪಿಯನ್ ಟ್ರೋಫಿಯಿಂದ ಟೀಂ ಇಂಡಿಯಾ ಕೈಬಿಟ್ಟಿತ್ತು.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಸಿರಾಜ್​ಗೆ ಅವಕಾಶ ನೀಡಿಲ್ಲ. ಇದರ ಜೊತೆಗೆ ಏಕದಿನ ಸರಣಿಯಲ್ಲೂ ಸ್ಥಾನ ಪಡೆದಿಲ್ಲ. ಅಷ್ಟೇ ಅಲ್ಲ, ಚಾಂಪಿಯನ್ಸ್ ಟ್ರೋಫಿಗೂ ಸಿರಾಜ್​ ಭಾರತ ತಂಡದಲ್ಲಿ ಆಯ್ಕೆಯಾಗಿಲ್ಲ.

ಹೀಗಾಗಿ ತಮ್ಮ ಹಳೆಯ ಲಯವನ್ನು ಮರಳಿ ಪಡೆಯುವತ್ತ ಗಮನ ಹರಿಸಿರುವ ಸಿರಾಜ್ ಇದೀಗ ರಣಜಿ ಟ್ರೋಫಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ನಾಗ್ಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದರಾಬಾದ್ ಹಾಗೂ ವಿದರ್ಭ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡ ಕೇವಲ 190 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.

ವಿದರ್ಭ ತಂಡವನ್ನು ಇಷ್ಟು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕೇವಲ ಒಂದು ವಿಕೆಟ್ ಪಡೆದರಾದರೂ, ತಮ್ಮ ಬಿಗಿ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಇದರ ಲಾಭ ಪಡೆದ ಸಹ ಬೌಲರ್‌ಗಳು ಸುಲಭವಾಗಿ ವಿಕೆಟ್ ಪಡೆದರು.

ಸಿರಾಜ್ ಮಾಂತ್ರಿಕ ದಾಳಿಯ ಮುಂದೆ ವಿದರ್ಭ ತಂಡ ಅಕ್ಷರಶಃ ತತ್ತರಿಸಿತು. ಅದು ಎಷ್ಟರಮಟ್ಟಿಗೆ ಎಂದರೆ ಸಿರಾಜ್ ಬೌಲ್ ಮಾಡಿದ 87 ಎಸೆತಗಳಲ್ಲಿ ವಿದರ್ಭ ತಂಡಕ್ಕೆ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ವಿದರ್ಭ ವಿರುದ್ಧ 18 ಓವರ್‌ಗಳನ್ನು ಬೌಲ್ ಮಾಡಿದ ಸಿರಾಜ್, 7 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದರು. ಇದಲ್ಲದೆ ಇದರಲ್ಲಿ 87 ಡಾಟ್ ಬಾಲ್​ಗಳು ಸೇರಿರುವುದು ವಿಶೇಷ. ಹೀಗಾಗಿ ಸಾಮರ್ಥ್ಯದ ಬಗ್ಗೆ ಮಾತನಾಡಿದವರಿಗೆ ತಮ್ಮ ಬೌಲಿಂಗ್ ಮೂಲಕ ಉತ್ತರ ಕೊಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!