FSL ವರದಿ ಬರುವವರೆಗೂ SITಯಿಂದ ತನಿಖೆ ತಾತ್ಕಾಲಿಕ ಸ್ಥಗಿತ: ಡಾ.ಜಿ ಪರಮೇಶ್ವರ್

0
Spread the love

ಬೆಂಗಳೂರು: ಅಧಿವೇಶನ ಆರಂಭವಾದ ದಿನದಿಂದಲೇ ಧರ್ಮಸ್ಥಳ ಪ್ರಕರಣವೇ ಚರ್ಚೆಯ ವಿಷಯವಾಗಿದೆ. ಬಿಜೆಪಿ ನಿರಂತರವಾಗಿ ಸರ್ಕಾರದಿಂದ ತನಿಖಾ ವರದಿ ನೀಡಬೇಕೆಂದು ಒತ್ತಾಯಿಸುತ್ತಿದೆ. ಇದೀಗ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

Advertisement

ಎಸ್ಐಟಿ ಸರ್ಕಾರಕ್ಕೆ ಮಧ್ಯಂತರ ವರದಿ ಕೊಟ್ಟಿಲ್ಲ. ಶೋಧ ಮುಂದುವರಿಕೆ ಬಗ್ಗೆ ಎಸ್ಐಟಿ ತೀರ್ಮಾನ ಮಾಡುತ್ತದೆ. ಆದರೆ FSL ವರದಿ ಬರೋ ತನಕ ಅಸ್ಥಿಪಂಜರ ಶೋಧ ಸ್ಥಗಿತ ಮಾಡಲಾಗಿದೆ ಎಂದು ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ನಾವು ಪ್ರಣವ್ ಮೋಹಾಂತಿ ನೇತೃತ್ವದ ಎಸ್‌ಐಟಿ ರಚನೆ ಮಾಡಿದ್ದೆವು. ಸದ್ಯ ಅವರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಸ್ಥಳಗಳನ್ನು ಅನಾಮಿಕ ವ್ಯಕ್ತಿ ಗುರುತಿಸಿದ್ದನು.

ಅವುಗಳನ್ನು ಅಗೆದು ಕಳೇಬರ ಉತ್ಖನನ ನಡೆಸಿದ್ದಾರೆ. ಆದ್ರೆ, ಅವುಗಳಲ್ಲಿ ಅನಾಮಿಕ ತೋರಿಸಿದ 2 ಸ್ಥಳಗಳಲ್ಲಿ ಮಾತ್ರ ಕೆಲವು ಕಳೆ ಬರದ ಕುರುಹು ಪತ್ತೆಯಾಗಿವೆ ಎಂದರು. ಸದ್ಯ, ಕಳೆಬರ ಸಿಕ್ಕಿರುವ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ. ಈಗಾಗಲೇ ಕಳೆಬರ ಹಾಗೂ ಅಲ್ಲಿ ಸಿಕ್ಕಂತಹವುಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಆದ್ರೆ, ಇನ್ನೂ ಕೂಡ ಎಫ್‌ಎಸ್‌ಎಲ್ ವರದಿ ಬಂದಿಲ್ಲ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here