HomeCrime Newsಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೊಲೆಗೆ ಸ್ಕೆಚ್ !

ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೊಲೆಗೆ ಸ್ಕೆಚ್ !

For Dai;y Updates Join Our whatsapp Group

Spread the love

ಅಪರಿಚಿತರಿಂದ ಅಂಜುಮನ್ ಅಧ್ಯಕ್ಷನ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮನೆಯಲ್ಲಿ ನಡೆದಿದೆ. 10ಕ್ಕೂ ಹೆಚ್ಚು ಜನ ಅಪರಿಚಿತರು ತಮಟಗಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಯುವಕರು ತಮಟಗಾರ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಟಗಾರ ಅವರು ಮನೆಯಲ್ಲಿರದೆ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಇಸ್ಮಾಯಿಲ್ ಅವರ ಮೇಲೆ ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆ ನಡೆಸಲು ಈ ಯುವಕರು ಗುಂಪು ತಯಾರಾಗಿತ್ತು. ಇಸ್ಮಾಯಿಲ್ ಅವರ ಊರಲ್ಲಿ ಇಲ್ಲದೇ ಹೋಗಿದ್ದರಿಂದ ಆತಂಕಗೊಂಡಿರುವ ಅವರ ಮನೆಯವರು ಧಾರವಾಡದ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!