ಧರ್ಮಸ್ಥಳಕ್ಕೆ ಅಪಪ್ರಚಾರ: ಕೆಲ ಹಿಂದೂ ವಿರೋಧಿಗಳಿಂದ ಷಡ್ಯಂತ್ರ – ಯತ್ನಾಳ್

0
Spread the love

ವಿಜಯಪುರ:- ಧರ್ಮಸ್ಥಳಕ್ಕೆ ಕೆಲ ಹಿಂದೂ ವಿರೋಧಿಗಳಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ಅವರು, ಧರ್ಮಸ್ಥಳ ಬುರುಡೆ ಕೇಸ್ ವಿಷಯದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ.

Advertisement

13 ಕಡೆ ಅಗೆದರೂ ಏನು ಸಿಗಲಿಲ್ಲ. ಹಿಟಾಚಿಯಿಂದ ಅಗೆದರೂ ಏನು ಸಿಗದೇ ಇದ್ದ ಮೇಲೆ ಇದೊಂದು ಷಡ್ಯಂತ್ರವೇ ಹೌದು. ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲವು ಹಿಂದೂ ವಿರೋಧಿಗಳ ಆಟವಿದು. ಕಾಂಗ್ರೆಸ್ ಹೈಕಮಾಂಡ್‌ನ ಆದೇಶದ ಮೇಲೆ ಸಿದ್ದರಾಮಯಯ್ಯನವರು ಎಸ್‌ಐಟಿ ರಚಿಸಿದ್ದಾರೆ ಎಂದರು

ಅನಾಮಿಕ ದಿನೇ ದಿನೇ ಒಂದೊಂದು ಜಾಗ ಹೇಳ್ತಾನೆ. ಇನ್ನೂ 30 ಕಡೆ ಹೂತಿದೀನಿ ಅಂತಲೂ ಹೇಳುತ್ತಾನೆ. ಎಲ್ಲ ಕಡೆ ಅಗೆಯೋಕೆ ಆಗುತ್ತಾ? ಮುಂದೊಂದು ದಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೆಳಗೆ ಹೂತಿದ್ದೀನಿ ಅಂತ ಹೇಳಿದ್ರೆ, ಅಲ್ಲಿಯೂ ಶೋಧ ಮಾಡ್ತೀರಾ? ಧರ್ಮಸ್ಥಳದ ಹೆಸರು ಕೆಡಿಸಲು ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಅನಾಮಿಕ, ಯೂಟ್ಯುಬರ್ ಸಮೀರ್ ಎಂಡಿ, ತಿಮರೋಡಿ ಎಲ್ಲರ ಬ್ರೇನ್ ಮ್ಯಾಪಿಂಗ್ ಮಾಡಿ ಎಂದು ಆಗ್ರಹಿಸಿದರು.

ಈ ಪ್ರ‍್ರಕರಣವನ್ನು ಎನ್‌ಐಎಗೆ ವಹಿಸಬೇಕು. ನೆಲದಲ್ಲಿ ಗುಂಡಿ ಅಗಿಯೋದು ಬಂದ್ ಮಾಡಬೇಕು. ಪೊಲೀಸರಿಗೆ ವಿಶ್ರಾಂತಿ ಸಿಗಲಿ. ಸರ್ಕಾರ ಎಸ್‌ಐಟಿ ರಚನೆ ಮಾಡಿದೆ, ಅದಕ್ಕೆ ಪೊಲೀಸರು ತನಿಖೆ ಮಾಡ್ತಿದ್ದಾರೆ ಅಷ್ಟೆ. ಪೊಲೀಸರ ಕಾರ್ಯ ಕೂಡ ಶ್ಲಾಘನೀಯ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here