ಗದಗ: ರಾಜ್ಯ ಕಂಡ ಮೇರು ವ್ಯಕ್ತಿತ್ವದ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ನಮ್ಮನ್ನ ಅಗಲಿದ್ದಾರೆ ಎಂದು ಎಸ್ ಎಂ ಕೃಷ್ಣ ನಿಧನಕ್ಕೆ ರೋಣ ಶಾಸಕ ಜಿಎಸ್ ಪಾಟೀಲ ಸಂತಾಪ ಸೂಚಿಸಿದ್ದಾರೆ.ಜಿಲ್ಲೆಯ ರೋಣ ಪಟ್ಟಣದಲ್ಲಿ ಮಾತನಾಡಿದ ಅವರು, ಎಸ್ ಎಂಕೆ ಅವರು ರಾಜ್ಯದ ಸಿಎಂ, ಡಿಸಿಎಂ ಆಗಿದ್ದವರು. ಕೇಂದ್ರದ ವಿವಿಧ ಖಾತೆಯ ಸಚಿವರಾಗಿ,
ಮಹಾರಾಷ್ಟ್ರ ರಾಜ್ಯಪಾಲರಾಗಿ ದೇಶಕ್ಕೆ ಸೇವೆ ಸಲ್ಲಿಸಿದವರು. ಅವರ ಕಾಲಾವಧಿಯಲ್ಲಿ ಬೆಂಗಳೂರನ್ನ ಸಿಂಗಾಪುರ ಮಾದರಿಯಲ್ಲಿ ಬೆಳೆಸುವ ಹಂಬಲ ಹೊಂದಿದ್ದರು. ಬೆಂಗಳೂರನ್ನ ಐಟಿ, ಬಿಟಿ ಹಬ್ ಮಾಡಲು ಯಶಸ್ವಿಯಾಗಿದ್ದಾರೆ. ಅದಲ್ಲದೆ ಬಿಸಿ ಊಟ, ಸ್ತ್ರೀ ಶಕ್ತಿ ಯೋಜನೆ ತಂದಂತವರು ಎಂದು ಜಿ ಎಸ್ ಪಾಟೀಲ ಸ್ಮರಿಸಿದ್ದಾರೆ.
https://youtu.be/egeOyBUW37w
ಇನ್ನೂ ನಮ್ಮ ಕುಟುಂಬದ ಮೇಲೂ ಎಸ್ ಎಂಕೆ ಪ್ರೀತಿ ವಿಶ್ವಾಸ ಇಟ್ಟಿದ್ದರು. ಅವರ ಅಧಿಕಾರಾವಧಿಯಲ್ಲಿ ಸಹೋದರ ವಿ ಎಸ್ ಪಾಟೀಲರನ್ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಅವರ ದಕ್ಷ ಆಡಳಿತ ಕಂಡು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿಯೂ ಮಾಡಿದ್ದರು. ಅದಲ್ಲದೆ 2004 ರಲ್ಲಿ ನಮ್ಮ ಕುಟುಂಬದ ಮೂವರು ಸಹೋದರರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದರು. ಅವರು ನಮ್ಮ ಜೊತೆ ಇಲ್ಲ.. ಆದ್ರೆ ಅವರು ಮಾಡಿದ ಕೆಲಸ ನಮ್ಮ ಜೊತೆಗಿವೆ ಎಂದು ಭಾವುಕರಾದರು.