ಬೆಂಗಳೂರು:- ಈ ಹಿಂದೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸ್ಮಾರ್ಟ್ ಮೀಟರ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಯಾವುದೇ ತನಿಖಾ ಪ್ರಗತಿ ಕಾಣದೇ ಇರೋದ್ರಿಂದ ಮೂವರು ಬಿಜೆಪಿ ಶಾಸಕರು ಕೋರ್ಟ್ ಮೊರೆ ಹೋಗಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ಶಾಸಕ ಅಶ್ವಥ್‌ನಾರಾಯಣ, ಎಸ್.ಆರ್ ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಈ ದೂರು ದಾಖಲಿಸಿದ್ದು, ಅರ್ಜಿದಾರರ ಪರವಾಗಿ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದ್ದಾರೆ.
ಬ್ಲ್ಯಾಕ್ ಲಿಸ್ಟ್‌ನಲ್ಲಿರೋ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡು ದುಬಾರಿ ದರ ವಿಧಿಸಲಾಗಿದೆ ಅಂತ ವಾದಿಸಿದ್ರು. ವಾದ ಪ್ರತಿವಾದಗಳನ್ನು ಆಲಿಸಿ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಇನ್ನೂ ಖಾಸಗಿ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಜೆ. ಜಾರ್ಜ್, ದೂರುದಾರರು ಕೋರ್ಟ್ ಮೊರೆ ಹೋಗಿದ್ದಾರೆ. ನಾವು ಕೂಡ ವಿವರಣೆ ನೀಡುತ್ತೇವೆ. ಅಂತಿಮವಾಗಿ ಕೋರ್ಟ್ ನಿರ್ಧಾರ ಮಾಡಲಿದೆ ಎಂದರು.