SM Krishna: ಶಾಲಾ ಕಟ್ಟಡದಲ್ಲಿ ನಡೆದಿತ್ತು SMK ಅವರ ವಿವಾಹ! ಆಮಂತ್ರಣ ಪತ್ರಿಕೆ ವೈರಲ್

0
Spread the love

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ನಮ್ಮನ್ನಗಲಿದ್ದಾರೆ. ನಾಡಿನಾದ್ಯಂತ ಎಸ್‌.ಎಂ ಕೃಷ್ಣ ಅಗಲಿಕೆಗೆ ಸಂತಾಪ ಸೂಚಿಸಲಾಗುತ್ತಿದೆ. ಅಪಾರ ಅಭಿಮಾನಿಗಳು, ಕುಟುಂಬಸ್ಥರು, ರಾಜಕೀಯ ಮುಖಂಡರು ಎಸ್‌.ಎಂ ಕೃಷ್ಣ ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ. ಇಂದು ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

Advertisement

ಇನ್ನೂ ಎಸ್ಎಂ ಕೃಷ್ಣ ಅವರ ವಿವಾಹದ ಆಮಂತ್ರಣ ಪತ್ರಿಕೆ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಸ್​ಎಂ ಕೃಷ್ಣ 1966 ರಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯ ಪ್ರೇಮರನ್ನು ವಿವಾಹವಾಗಿದ್ದರು. ಇವರಿಬ್ಬರ ವಿವಾಹ 1966 ರ ಏಪ್ರಿಲ್ 29 ರಂದು ಶಿವಮೊಗ್ಗ ನ್ಯಾಷನಲ್ ಹೈಸ್ಕೂಲ್​ನಲ್ಲಿ ನೆರವೇರಿತ್ತು. ಸದ್ಯ ಎಸ್​​ಎಂ ಕೃಷ್ಣ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


Spread the love

LEAVE A REPLY

Please enter your comment!
Please enter your name here