ಕೇಂದ್ರ ಮಾಜಿ ಸಚಿ̧ವೆ ಮಾಜಿ ರೂಪದರ್ಶಿ, ನಟಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ ಮತ್ತೆ ಬಣ್ಣದ ಬದುಕಿಗೆ ಎಂಟ್ರಿಕೊಟ್ಟಿದ್ದಾರೆ. ರಾಜಕೀಯಕ್ಕೆ ಎಂಟ್ರಿಕೊಟ್ಟ ಬಳಿಕ ಬಣ್ಣದ ಲೋಕದಿಂದ ದೂರ ಉಳಿದಿದ್ದ ಸ್ಮೃತಿ ಇರಾನಿ ಇದೀಗ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಸ್ಮೃತಿ ಇರಾನಿ ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಸೀರಿಯಲ್ ಮೂಲಕವೇ ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ.
2000ನೇ ಇಸವಿಯ ಜುಲೈ 3ರಿಂದ 2008ರ ನವೆಂಬರ್ 6ರ ತನಕ ಪ್ರಸಾರ ಆಗಿದ್ದ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿತ್ತು. ಏಕ್ತಾ ಕಪೂರ್ ನಿರ್ಮಾಣ ಮಾಡಿದ ಈ ಸೀರಿಯಲ್ ಸ್ಮೃತಿ ಇರಾನಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ಇದೀಗ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಹೊಸ ರೂಪದಲ್ಲಿ ಬರಲು ಸಜ್ಜಾಗಿದೆ. ಇದರಲ್ಲಿ ಸ್ಮೃತಿ ಇರಾನಿ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆಯೂ ತುಳಸಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸ್ಮೃತಿ ಇರಾನಿ ಈ ಭಾರಿಗೆ ತುಳಸಿ ಎಂಬ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
1998ರಲ್ಲಿ ಸ್ಮೃತಿ ಇರಾನಿ ಮಿಸ್ ಇಂಡಿಯಾ ಸ್ಪರ್ಧಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ ಸ್ಮೃತಿ ಇರಾನಿ ಅವರು 2000ರಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಎನ್ನುವ ಧಾರಾವಾಹಿಯಲ್ಲಿ ಸ್ಮೃತಿ ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.
ಸದ್ಯ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಧಾರವಾಹಿಯ ಸ್ಮೃತಿ ಇರಾನಿ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಸಾಂಪ್ರದಾಯಿಕ ಗೃಹಿಣಿಯ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, ಕೆಂಪು ಬಿಂದಿ, ಕಪ್ಪು ಮಣಿಗಳ ಮಂಗಳಸೂತ್ರದಿಂದ ಮಿಂಚಿದ್ದಾರೆ. ಅವರ ಪಾತ್ರ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೆಟ್‌ನಲ್ಲಿನ ಕೆಲ ಬದಲಾವಣೆ ಕೆಲಸದಿಂದಾಗಿ ಧಾರಾವಾಹಿ ಆರಂಭ ಸ್ವಲ್ಪ ವಿಳಂಬವಾಗಲಿದೆ ಎನ್ನಲಾಗಿದೆ. ಏಕ್ತಾ ಕಪೂರ್ ತನ್ನ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿಯನ್ನು ನಿರ್ಮಾಣ ಮಾಡಲಿದ್ದಾರೆ.