ಸ್ಮಗ್ಲಿಂಗ್ ಪ್ರಕರಣ: ಖ್ಯಾತ ನಟ ದುಲ್ಕರ್ ಸಲ್ಮಾನ್ ಗೆ ಸಮನ್ಸ್ ಜಾರಿ ಮಾಡಿದ ಅಧಿಕಾರಿಗಳು

0
Spread the love

ಖ್ಯಾತ ಸ್ಟಾರ್‌ ನಟ ಕಂ ನಿರ್ಮಾಪಕ ದುಲ್ಕರ್‌ ಸಲ್ಮಾನ್‌ ಗೆ ಸಂಕಷ್ಟ ಎದುರಾಗಿದೆ. ದುಲ್ಕರ್‌ ಸಲ್ಮಾನ್‌ ಗೆ ಸಿನಿಮಾಗಳ ಜೊತೆಗೆ ಐಶಾರಾಮಿ ಬ್ರ್ಯಾಂಡ್‌ ಕಾರುಗಳ ಸಂಗ್ರಹದ ಹವ್ಯಾಸವು ಇದೆ. ಮೂಲಗಳ ಪ್ರಕಾರ ದುಲ್ಕರ್ ಸಲ್ಮಾನ್ ಬಳಿ 40ಕ್ಕೂ ಹೆಚ್ಚು ಕಾರುಗಳಿವೆಯಂತೆ. ಇದೀಗ ಇದೇ ಅವರಿಗೆ ಸಮಸ್ಯೆ ತಂದೊಡಿದೆ. ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದುಲ್ಕರ್ ಸಲ್ಮಾನ್​​ಗೆ ಕಸ್ಟಮ್ಸ್ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ.

Advertisement

ಕೇರಳದ ಕಸ್ಟಮ್ಸ್ ಕಮಿಷನರೇಟ್ ನಡೆಸಿದ ‘ಆಪರೇಷನ್ ನಮ್ಕೂರ್’ ಎಂಬ ವಿಶೇಷ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ, 36 ಐಶಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ ಸೇರಿದ ಎರಡು ಐಶಾರಾಮಿ SUVಗಳು ಸೇರಿವೆ. ಕಸ್ಟಮ್ಸ್ ಅಧಿಕಾರಿಗಳು ದುಲ್ಕರ್ ಅವರಿಗೆ ಸಮನ್ಸ್ ಜಾರಿ ಮಾಡಿ, ದಾಖಲೆಗಳನ್ನು ಸಲ್ಲಿಸುವಂತೆ ಆದೇಶ ನೀಡಿದ್ದಾರೆ. ಇದೇ ರೀತಿ, ಪೃಥ್ವಿರಾಜ್ ಸುಕುಮಾರನ್, ಅಮಿತ್ ಚಕ್ಕಲಕ್ಕಲ್ ಸೇರಿದಂತೆ ಇತರ ಸಿನಿಮಾ ಸೆಲೆಬ್ರಿಟಿಗಳ ಮನೆಗಳ ಮೇಲೂ ದಾಳಿ ನಡೆದಿದೆ.

ನುಮ್ಕೂರ್ ಹೆಸರಿನಲ್ಲಿ ದಾಳಿ ನಡೆದಿದ್ದು ನಮ್ಕೂರ್‌ ಎಂದರೆ ಭೂತಾನಿ ಭಾಷೆಯಲ್ಲಿ ವಾಹನ ಎಂಬ ಅರ್ಥ ಇದೆ.  ನಿಯಮಬಾಹಿರವಾಗಿ ಹೊರದೇಶಗಳಿಂದ ಕಾರುಗಳನ್ನು ಖರೀದಿ ಮಾಡಿದವರನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ಮಾಡಲಾಗಿತ್ತು.

ದುಲ್ಕರ್ ಅವರ ಮನೆಯಿಂದ ಟೊಯೊಟಾ ಲ್ಯಾಂಡ ಕ್ರ್ಯೂಸರ್, ಲಾಂಡ್ ರೋವರ್ ಡಿಫೆಂಡರ್ ಕಾರುಗಳನ್ನು ಸೀಜ್ ಮಾಡಿದ್ದಾರೆ. ಎರಡೂ ಕಾರುಗಳನ್ನು ತ್ರಿಶೂರ್​​ನಲ್ಲಿರುವ ದುಲ್ಕರ್ ಅವರ ಮನೆಯಿಂದ ಸೀಜ್ ಮಾಡಲಾಗಿದ್ದು, ಎರಡರಲ್ಲಿ ಒಂದು ಕಾರು ದುಲ್ಕರ್ ಅವರ ಹೆಸರಿನಲ್ಲಿ ನೊಂದಣಿ ಆಗಿಲ್ಲ ಎನ್ನಲಾಗುತ್ತಿದೆ. ಆ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯ ಚಾಲ್ತಿಯಲ್ಲಿದೆ. ದುಲ್ಕರ್ ಈ ಎರಡು ಕಾರುಗಳನ್ನು ಭೂತಾನ್ ನಿಂದ ಖರೀದಿಸಿದ್ದಾರೆ ಎಂಬ ಅನುಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here