ಬೆಂಗಳೂರು: ಇದುವರೆಗೆ ಕೇಂದ್ರದಿಂದ ಕೊಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆದಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಇದುವರೆಗೆ ಕೇಂದ್ರದಿಂದ ಕೊಟ್ಟ ಹಣವನ್ನು ಈ ಸರ್ಕಾರ ಲೂಟಿ ಹೊಡೆದಿದೆ. ಮುಡಾ, ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆಯಲಾಗಿದೆ. ಕೇಂದ್ರದಿಂದ ತಾರತಮ್ಯ ಆಗಿಲ್ಲ, ಈ ಹಿಂದೆಯೇ ನಾವು ಅಂಕಿಅಂಶ ಬಿಡುಗಡೆ ಮಾಡಿದ್ದೇವೆ.
Advertisement
ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಬರ್ತಿತ್ತು? ಮೋದಿ ಕಾಲದಲ್ಲಿ ಎಷ್ಟು ಬಂದಿದೆ ನೋಡಲಿ. ಮೆಟ್ರೋ, ಹೈವೇ, ರೈಲು, ಬೆಂಗಳೂರು ಅಭಿವೃದ್ಧಿಗೆ ಇತ್ಯಾದಿಗಳಿಗೆ ಎಷ್ಟು ಬಂದಿದೆ ಹೇಳಿ? ಮೆಟ್ರೋಗೆ ಎಷ್ಟು ಬಂದಿದೆ ಅಂತ ಸಿದ್ದರಾಮಯ್ಯ ಹೇಳೋದೇ ಇಲ್ಲ. ಬಂದ ಹಣ ಎಲ್ಲ ಲೂಟಿ ಹೊಡೀತಾರೆ. ಜಲಜೀವನ್ ಮಿಷನ್ಗೆ ಎಷ್ಟು ಬಂದಿದೆ, ಲೆಕ್ಕ ಕೊಡಿ. ಎಲ್ಲ ಲೆಕ್ಕ ಕೊಡಿ, ಜನ ತೀರ್ಮಾನ ಮಾಡ್ತಾರೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.