ಬೆಂಗಳೂರು:-ಹೂ , ಹಣ್ಣು, ತರಕಾರಿ ಬೆಲೆ ಗಗನಕ್ಕೇರಿದ್ದು, ವರಮಹಾಲಕ್ಷ್ಮಿ ಹಬ್ಬ ರೈತರಿಗೆ ವರವಾದರೆ, ಗ್ರಾಹಕರಿಗೆ ಹೊರೆಯಾದಂತಾಗಿದೆ.
ಹಬ್ಬದ ಪ್ರಯುಕ್ತ ರೈತರು ಬೆಳೆಯುವ ಹೂಗಳಿಗೆ ಕೆ.ಜಿ ಸೇವಂತಿ, ಕೆಜಿ ರೋಜ್ ಬೆಲೆ ಇನ್ನೂರು ರೂಪಾಯಿಯಾದರೆ, ಕೆಜಿ ಚೆಂಡು ಹೂ ಬೆಲೆ ನೂರು ರೂಪಾಯಿ, ಇತ್ತ ಕನಕಾಂಬರ, ಕಾಕಡ ಬೆಲೆ ಐನೂರು ರೂಪಾಯಿ. ಜೊತೆಗೆ ಸುಗಂಧ ರಾಜನ ಇನ್ನೂರು ರೂಪಾಯಿಗೆ ಮಾರಾಟವಾಗುತ್ತಿದೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂಗಳಿಗೆ ಬೆಲೆ ಬಂದು ರೈತರಿಗೆ ಸಂತಸವಾದರೆ, ಇತ್ತ ಹಬ್ಬ ಮಾಡಲು ವರಮಹಾಲಕ್ಷ್ಮಿ ಭಕ್ತರು ಪರದಾಡುತಿದ್ದಾರೆ.
ಹೂ. ಹಣ್ಣು, ತರಕಾರಿ ಸೇರಿದಂತೆ ಯಾವುದೇ ವಸ್ತು ಕೊಂಡರೂ ಕೈ ಸುಡುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಹೂ ಹಣ್ಣು ತರಕಾರಿ ಬೆಲೆ ಏರಿಕೆಯಾಗಿರುವುದಕ್ಕೆ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.



