ವಿಜಯಸಾಕ್ಷಿ ಸುದ್ದಿ, ಗದಗ: ದಸರಾ ಹಬ್ಬವೆಂದರೆ ಎಸ್‌ಎಸ್‌ಕೆ ಸಮಾಜದವರಿಗೆ ಧರ್ಮಾಚರಣೆ, ಸಂಭ್ರಮಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಲ್ಲರೂ ಒಟ್ಟಾಗಿ ಆಚರಿಸುವ ಹಬ್ಬವಾಗಿದೆ ಎಂದು ಹುಬ್ಬಳ್ಳಿಯ ಕೆಜಿಎಫ್ ಪೌಂಡೇಶನ್ ಮುಖ್ಯಸ್ಥ ಶ್ರೀಗಂದ ಗಣೇಶ ಶೇಠ ಹೇಳಿದರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ್ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ-2025ರ 3ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲ ಸಮಾಜದ ಬಾಂಧವರನ್ನು ಹತ್ತಿರದಿಂದ ನೋಡಿದ್ದೇನೆ. ಅದರಲ್ಲಿ ಎಸ್‌ಎಸ್‌ಕೆ ಸಮಾಜ ಬಾಂಧವರು ಸ್ವ-ಉದ್ಯೋಗದಲ್ಲಿ ಸಂತೃಪ್ತಿ ಕಾಣುವ ಮೂಲಕ ಸದೃಢ ಸಮಾಜಕ್ಕೆ ಶಕ್ತಿ ತುಂಬುತ್ತಿದ್ದಾರೆ. ಅವರು ಸ್ವ-ಉದ್ಯೋಗದಿಂದ ಸ್ವಾವಲಂಬಿಯಾಗಿ ಬದುಕಬಹುದೆಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಬೆಳಗಾವಿಯ ಗಣ್ಯ ಉದ್ಯಮಿ ಶರತ ಕವಟಗಿಮಠ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಮೇಲೆ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ದಸರಾ ಕಮಿಟಿ ಚೆರ್ಮನ್ ಅನಿಲ್ ಖಟವಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಂಚ ಕಮಿಟಿ ಸದಸ್ಯರಾದ ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಪರಶುರಾಮ ಬದಿ, ವಿಷ್ಣುಸಾ ಶಿದ್ಲಿಂಗ, ಶ್ರೀನಿವಾಸ ಬಾಂಡಗೆ, ಮಾರುತಿ ಪವಾರ, ಅಂಬಾಸಾ ಖಟವಟೆ, ಮೋತಿಲಾಲಸಾ ಪೂಜಾರಿ, ಗಂಗಾಧರ ಹಬೀಬ, ಗಣಪತಿ ಜಿತೂರಿ, ವಿನೋದ ಬಾಂಡಗೆ, ದಸರಾ ಕಮಿಟಿಯ ಗೌರವ
ಕಾರ್ಯದರ್ಶಿ ರಾಘು ಬಾರಡ, ತರುಣ ಸಂಘದ ಶ್ರೀಕಾಂತ ಬಾಕಳೆ, ಸುಧೀರ ಕಾಟಿಗರ, ಮಾಧು ಬದಿ, ನಾಗರಾಜ ಖೋಡೆ, ಶ್ರೀನಿವಾಸ ಬಾಂಡಗೆ, ಮಹಿಳಾ ಮಂಡಳದ ಅಧ್ಯಕ್ಷೆ ಉಮಾಬಾಯಿ ಬೇವಿನಕಟ್ಟಿ, ಗೀತಾಬಾಯಿ ಹಬೀಬ ಮುಂತಾದವರು ಉಪಸ್ಥಿತರಿದ್ದರು.
ಪ್ರಕಾಶ ಬಾಕಳೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಬಲರಾಮ ಬಸವಾ ವಂದಿಸಿದರು.
ಮುಖ್ಯ ಅತಿಥಿಗಳಾದ ಕರಬಸಪ್ಪ ಹಂಚಿನಾಳ ಮಾತನಾಡಿ, ಎಸ್‌ಎಸ್‌ಕೆ ಸಮಾಜದವರು ದಸರಾ ಹಬ್ಬವನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಿಸುತ್ತ ಬರುತ್ತಿದ್ದಾರೆ. ಈ ಸಮಾಜದವರು ಸ್ವ-ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದಂತೆ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡುವದರ ಜೊತೆಗೆ ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕವಾಗಿ ಸಹಾಯ-ಸಹಕಾರ ನೀಡಬೇಕು ಎಂದು ಹೇಳಿದರು.