ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಸುದರ್ಶನ ಚಕ್ರ ಯುವಕ ಮಂಡಳದ ವತಿಯಿಂದ ಗದಗ ಕಾಟನ್ ಮಾರ್ಕೆಟ್ ರಸ್ತೆಯ ವೀರಶೈವ ಜನರಲ್ ಲೈಬ್ರರಿ ಬಳಿ ಹಿಂದೂ ಮಹಾಗಣಪತಿಯ ಉತ್ಸವದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಉತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಎಸ್.ಎಚ್. ಶಿವನಗೌಡರ ಹೇಳಿದರು.
ಗಜಾನನೋತ್ಸವ ವೇದಿಕೆಯಲ್ಲಿ ಗಣೇಶ ಮೂರ್ತಿ ಕಲಾವಿದ ರೋಣದ ಸಾಗರ ಚಿತ್ರಗಾರ ಅವರನ್ನು ಉತ್ಸವ ಸಮಿತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಕಲಾವಿದರು ಅತ್ಯಾಕರ್ಷಕವಾದ ಮೂರ್ತಿ ನಿರ್ಮಿಸಿದ್ದು ಭಕ್ತಾಧಿಗಳ ಮೆಚ್ಚುಗೆ-ಭಕ್ತಿಗೆ ಪಾತ್ರವಾಗಿದೆ ಎಂದರು.
೨೧ ದಿನಗಳವರೆಗೆ ಹಿಂದೂ ಮಹಾಗಣಪತಿಯ ಉತ್ಸವ ಜರುಗಲಿದೆ. ಈ ನಿಮಿತ್ತ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಂತಿ-ಸೌಹಾರ್ದತೆಗಾಗಿ, ಸಕಲರಲ್ಲೂ ಸದ್ಭಾವನೆ ಮೂಡಿಸಲು ಸೆ. 12ರಂದು ಬೆಳಿಗ್ಗೆ 6 ಗಂಟೆಗೆ ಮಂಟಪದಲ್ಲಿ ಗಣಹೋಮ ಜರುಗುವದು.
ಉತ್ಸವ ಸಮಿತಿಯ ಅಧ್ಯಕ್ಷ ಸುಧೀರ ಕಾಟೀಗರ, ಯುವ ಮಂಡಳದ ಸಂಸ್ಥಾಪಕ ಅಧ್ಯಕ್ಷ, ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಬೀಬ ಸೇರಿದಂತೆ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ರವಿರಾಜ ಮಾಳೇಕೊಪ್ಪಮಠ, ಗಂಗಾಧರ ಹಬೀಬ, ಅಶ್ವಿನಿ ಜಗತಾಪ, ಅಂಕಿತ ಸಾವಕಾರ, ಶಿವು ಹಿರೇಮನಿಪಾಟೀಲ, ಕುಮಾರ ಮಾರನಬಸರಿ, ಖಜಾಂಚಿ ಕೀರ್ತಿ ಕಾಂಬಳೇಕರ, ಪ್ರಶಾಂತ ಪಾಟೀಲ, ನಗರಸಭಾ ಸದಸ್ಯರಾದ ಹುಲಿಗೆಮ್ಮ ಹಬೀಬ, ಶ್ರೀಪತಿ ಉಡುಪಿ, ಮೋಹನ ಮಾಳಶೆಟ್ಟರ, ವಂದನಾ ವೆರ್ಣೆಕರ, ರಂಜನಾ ಕೋಟಿ, ಲತಾ ಮುತ್ತಿನಪೆಂಡಿಮಠ, ಮಂಜು ಖೋಡೆ, ಯಲ್ಲಪ್ಪ ಭಜಂತ್ರಿ, ರಮೇಶ ಸಜ್ಜಗಾರ, ರವಿ ಚವ್ಹಾಣ, ಗಜು ಹಬೀಬ, ಗಣೇಶ ಲದವಾ, ಸ್ವರೂಪ ಹುಬ್ಬಳ್ಳಿ, ಸುರೇಶ ಚವ್ಹಾಣ, ಪ್ರಶಾಂತ ಚವಡಿ, ನಾಗರಾಜ ಸೋಳಂಕಿ, ವಿಶ್ವನಾಥ ಶಿರಗಣ್ಣವರ, ರವಿ ನರೇಗಲ್ಲ, ಪ್ರಸಾದ ಸಿದ್ಲಿಂಗ್, ಅನಿಲ ಪವಾರ, ಗಿರೀಶ ಬೇವಿನಕಟ್ಟಿ, ಗಣೇಶ ಚವ್ಹಾಣ, ಮಾರುತಿ ಕಾಟವಾ, ಪ್ರವೀಣ ನಾಯ್ಕರ್, ಈರಣ್ಣ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.
ಉತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಮಹಾ ಅನ್ನಸಂತರ್ಪಣೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಉತ್ಸವ ಸಮಿತಿಯ ಪದಾಧಿಕಾರಿಗಳು ಉತ್ಸಾಹದೊಂದಿಗೆ ಎಲ್ಲ ಕಾರ್ಯಗಳನ್ನು ಸುಗಮಗೊಳಿಸಿಸುತ್ತಿದ್ದಾರೆ. ಮಹಿಳಾ ಸಮಿತಿಯ ಪದಾಧಿಕಾರಿಗಳೂ ಸಹ ಉತ್ಸುಕತೆಯಿಂದ ಕಾರ್ಯ ಮಾಡುತ್ತಿದ್ದಾರೆ ಜೊತೆಗೆ ಭಕ್ತಾಧಿಗಳು, ಮಹಾದಾನಿಗಳು ಉದಾರತೆ ಮೆರೆದಿದ್ದಾರೆ ಎಂದು ಎಸ್.ಎಚ್. ಶಿವನಗೌಡರ ತಿಳಿಸಿದರು.
Advertisement