ರೋಟರಿ ಕ್ಲಬ್‌ನಿಂದ ಸಮಾಜಮುಖಿ ಕಾರ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಗದಗ-ಬೆಟಗೇರಿ ರೋಟರಿ ಕ್ಲಬ್ ಅಸ್ತಿತ್ವ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಈ ಕ್ಲಬ್ ಗದಗ ಪರಿಸರದಲ್ಲಿ ಕಳೆದ 79 ವರ್ಷಗಳಿಂದ ಸಮಾಜಮುಖಿಯಾಗಿ, ಜನಮುಖಿಯಾಗಿ ಕಾರ್ಯ ಮಾಡಿದ ಹಿರಿಯ ಸಂಸ್ಥೆಯಾಗಿದೆ ಎಂದು ರೋಟರಿ ಜಿಲ್ಲೆ 3170ದ ಗವರ್ನರ್ ಅಶೋಕ ನಾಯಕ ಹೇಳಿದರು.

Advertisement

ಅವರು ಗದಗ-ಬೆಟಗೇರಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕ್ಲಬ್‌ನ 80ನೇ ಸನದು ಪ್ರಧಾನ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ, ಬಡವರಿಗಾಗಿ ಕಣ್ಣಿನ ಆಸ್ಪತ್ರೆ, ಅಂಧ ವಿದ್ಯಾರ್ಥಿಗಳಿಗೆ ಕೃತಕ ಕಣ್ಣಿನ ಚಾಳೀಸ್‌ಗಳನ್ನು ವಿತರಿಸಿದ್ದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಮಾಜಿಕ ಕೆಲಸಗಳ ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಗೊಳಿಸಿರಿ ಎಂದರು.

ವಿಶ್ವನಾಥ ಯಳಮಲಿ, ಡಾ. ಉಮೇಶ ಪುರದ ಪರಿಚಯಿಸಿದರು. ಶ್ರೀಧರ ಸುಲ್ತಾನಪೂರ ಸಂಸ್ಥೆಯು 79 ವರ್ಷಗಳಲ್ಲಿ ಕೈಗೊಂಡ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳನ್ನು ಪ್ರಸ್ತುತಪಡಿಸಿ ಸಂಸ್ಥೆಯು ಮಂಬರುವ ದಿನಗಳಲ್ಲಿ ಕೈಗೊಳ್ಳವ ಕಾರ್ಯಗಳ ಸಂಕ್ಷಿಪ್ತ ವರದಿಯನ್ನು ತಿಳಿಸಿದರು.

ರೋಟರಿ ಸಂಸ್ಥೆಯ ೮೦ನೇ ವರ್ಷದ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಆರ್.ಬಿ. ಉಪ್ಪಿನ ಸ್ವಾಗತಿಸಿದರು. ಮಹೇಶ ಕುಂದ್ರಾಳಹಿರೇಮಠ ಪ್ರಾರ್ಥಿಸಿದರು. ರೋಟರಿ ಸಂಸ್ಥೆ ಗಜೇಂದ್ರಗಡ ಸಂಸ್ಥೆಯು ರಜತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಆ ಕ್ಲಬ್‌ನ ಅಧ್ಯಕ್ಷ ಮಾರುತಿ ನಾವಡೆ ಅವರನ್ನು ಸನ್ಮಾನಿಸಲಾಯಿತು. ಪಶು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ನವೀನ ಟಿಕಾರೆ ನೂತನ ಸದಸ್ಯರಾಗಿ ಸೇರಿದರು. 80ನೇ ಸನದು ಪ್ರಧಾನ ದಿನಾಚರಣೆಯ ಅಂಗವಾಗಿ ನಡೆದ ಚೆಸ್ ಹಾಗೂ ಕೇರಮ್ ಆಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಯಕ್ರಮದಲ್ಲಿ ಡಾ. ರಾಜಶೇಖರ ಬಳ್ಳಾರಿ, ಅಶೋಕ ಅಕ್ಕಿ, ಡಾ. ಜಿ.ಬಿ. ಪಾಟೀಲ, ಅನಿಲಕುಮಾರ ಹಂದ್ರಾಳ, ಅಕ್ಷಯ ಶೆಟ್ಟಿ, ಮಹಾಂತೇಶ ಬಾತಾಖಾನಿ, ಡಾ. ಪ್ರದೀಪ ಉಗಲಾಟ, ಕಾರ್ತಿಕ ಮುತ್ತಿನಪೆಂಡಿಮಠ, ಸುರೇಶ ಕುಂಬಾರ, ನರೇಶ ಜೈನ, ಚಂದ್ರಮೌಳಿ ಜಾಲಿ, ರಮೇಶ ಇಟಗಿ, ಡಾ. ಕಮಲಾಕ್ಷಿ ಅಂಗಡಿ ಮುಂತಾದವರು ಉಪಸ್ಥಿತರಿದ್ದರು. ವೀಣಾ ತಿರ್ಲಾಪೂರ ಹಾಗೂ ಬಾಲಕೃಷ್ಣ ಕಾಮತ್ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ ಅಕ್ಕಿ ವಂದಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ. ಬಿಡಿನಹಾಳ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಡಾ. ಪ್ರಕಾಶ ಕೊಲೋಳಗಿ, ಡಾ. ವ್ಹಿ.ಸಿ. ಕಲ್ಮಠ ಹಾಗೂ ಹೆಚ್.ಎಸ್. ಪಾಟೀಲ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

 


Spread the love

LEAVE A REPLY

Please enter your comment!
Please enter your name here