ವಿಜಯಸಾಕ್ಷಿ ಸುದ್ದಿ, ಗದಗ : ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನ ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಲ್ಲಸಮುದ್ರದ ಪೂಜ್ಯ ಶ್ರೀ ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗುರುವಾರ ನಗರದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ ಸಾಧಕ ಮಹನೀಯರಿಗೆ ಸನ್ಮಾನ ಹಾಗೂ ಶಿವನಗೌಡ ಪ್ರಭುಗೌಡ ಪಾಟೀಲ ಅವರ ಜನ್ಮದಿನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಿಸುವ, ಪರಿಸರ ಸಂರಕ್ಷಣೆ, ಸಸಿ ವಿತರಣೆ, ಹಿರಿಯ ಕಲಾವಿದರಿಗೆ ಹಾಗೂ ಸಾಧಕ ಮಹನೀಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಕೊರೋನಾ ಸಂದರ್ಭದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿ ಪ್ರತಿಷ್ಠಾನವು ಜನಮನ್ನಣೆ ಪಡೆದಿದೆ ಎಂದರು.
ಗದಗ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ರಾಜು ಕುರಡಗಿ, ಗದಗ ಜಿಲ್ಲಾ ಬಿಜೆಪಿಯ ಎಸ್.ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಶಿವಣ್ಣ ಮುಳಗುಂದ, ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಮುಖಂಡ ಮಹೇಶ ದಾಸರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೀಕ್ಷಕಿ ಜಹೀದಾಬೇಗಂ ಕಮತಗಿ, ಸಾಹಿತಿ ಕವಿತಾ ದಂಡಿನ, ಪತ್ರಕರ್ತ ಬಸವರಾಜ ದಂಡಿನ, ಧುರೀಣರಾದ ಅಮರನಾಥ ಗಡಗಿ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸೋಮೇಶ ಹಿರೇಮಠ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ಸ್ವಾಗತಿಸಿ ನಿರೂಪಿಸಿದರು. ಧೀರಜ ನಂದಿಕೋಲಮಠ ವಂದಿಸಿದರು.
ಸಮಾರಂಭದಲ್ಲಿ ಬಸನಗೌಡ ಪಾಟೀಲ, ಶಾರದಾ ಪಾಟೀಲ, ಆನಂದ ದಾಸರ, ಶಾಂತಗೌಡ ಪಾಟೀಲ, ಶ್ವೇತಾ ಹಡಗಲಿ, ಸಕ್ಕೂಬಾಯಿ ದಾಸರ, ಕಾವ್ಯ ಪಾಟೀಲ, ನೀಲವ್ವ ಭದ್ರಾಪೂರ, ನಿವೇದಿತಾ ಪಾಟೀಲ, ಜಗ್ಗು ಕಟ್ಟಿಮನಿ, ವಿಜಯಲಕ್ಷ್ಮಿ ದಾಸರ, ಶಿವಲೀಲಾ ಹಿರೇಮಠ ಮುಂತಾದವರಿದ್ದರು.