ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಬಿ.ಡಿ. ತಟ್ಟಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಕಿವುಡ ಮಕ್ಕಳ ವಸತಿಯುತ ಶಾಲೆಯಲ್ಲಿ ಹುಬ್ಬಳ್ಳಿಯ ನಂದನ್ ಪೇರಿಡೆನ್ಸ್ ಫೌಂಡೇಷನ್ ವತಿಯಿಂದ ಶಾಲಾ ಬ್ಯಾಗ್ ಮತ್ತು ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಜೆ. ತಟ್ಟಿ ವಹಿಸಿ ಮಾತನಾಡಿ, ವಿಕಲಚೇತನ ಮಕ್ಕಳ ಸ್ವಾವಲಂಬಿ ಬದುಕಿಗೆ ಆಸರೆಯಾಗುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಫೌಂಡೇಶನ್ ವತಿಯಿಂದ ಸಮಾಜಮುಖಿ ಕಾರ್ಯ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯದರ್ಶಿ ಡಾ. ವಿನೋದ ಹೊನ್ನಿಕೊಪ್ಪ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಮುಖ್ಯೋಪಾಧ್ಯಾಯೆ ಜಯಶ್ರೀ ಶೆಟ್ಟರ, ಶಿಕ್ಷಕರಾದ ಗಂಗಾರಾಮ ಪವಾರ ಮುಂತಾದವರಿದ್ದರು.
ಹುಬ್ಬಳ್ಳಿಯ ನಂದನ್ ಪೇರಿಡೆನ್ಸ್ ಫೌಂಡೇಷನ್‌ನವರಿಗೆ ಮಕ್ಕಳು ಧನ್ಯವಾದ ಅರ್ಪಿಸಿದರು. ಸಂಗೀತಾ ವಾಲಿ ಪ್ರಾರ್ಥಿಸಿದರು, ವಿಜಯಲಕ್ಷ್ಮಿ ಮುಧೋಳ ಸ್ವಾಗತಿಸಿದರು. ಅಶ್ವಿನಿ ಪಾಟೀಲ ನಿರೂಪಿಸಿದರು.