ವಿಜಯಸಾಕ್ಷಿ ಸುದ್ದಿ, ಗದಗ: ಭಾವಸಾರ ವ್ಹಿಜನ್ ಇಂಡಿಯಾ ಸೇವಾ ಸಂಸ್ಥೆಯಾಗಿದ್ದು, ಭಾವಸಾರ ಸಮುದಾಯದ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ ಎಂದು ಭಾವಸಾರ ವ್ಹಿಜನ್ ಇಂಡಿಯಾ ಏರಿಯಾ 101ರ ಗವರ್ನರ್ ದೀಪಕ ಮಾತಾಡೆ ಹೇಳಿದರು.
ಅವರು ಗದುಗಿನ ಶ್ರೀ ವಿಠ್ಠಲ ಮಂದಿರದ ಸಭಾಂಗಣದಲ್ಲಿ ಭಾವಸಾರ ವ್ಹಿಜನ್ ಇಂಡಿಯಾದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ವ್ಹಿಜನ್ ಕಳೆದ 25 ವರ್ಷಗಳಿಂದ ಸಮಾಜದ ಏಳ್ಗೆಗಾಗಿ ತನ್ನದೇ ಆದ ಇತಿಮಿತಿಯಲ್ಲಿ ಕಾರ್ಯ ಮಾಡುತ್ತಿದೆ. ಬರಲಿರುವ ದಿನಗಳಲ್ಲಿಯೂ ಈ ಸೇವಾಕೈಂಕರ್ಯವನ್ನು ಮುಂದುವರೆಸಲಿದೆ. ಈ ಕಾರ್ಯಕ್ಕೆ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಕೈಜೋಡಿಸಿ ಸಂಘಟನೆಯ ಬಲವರ್ಧನೆಗೆ ಮುಂದಾಗಬೇಕೆಂದರು.
ಪದಗ್ರಹಣ ಸಮಾರಂಭದ ಅಧಿಕಾರಿಗಳಾಗಿ ಆಗಮಿಸಿದ್ದ ವ್ಹಿಜನ್‌ನ ಗೌರವ ಕಾರ್ಯದರ್ಶಿ ಜಗದೀಶ ಹಂಚಾಟೆ, ರಾಷ್ಟ್ರೀಯ ಖಜಾಂಚಿ ಪ್ರಕಾಶ ತಿರುಮಲೆ, ಫೌಂಡರ್ ಸೆಕ್ರೆಟರಿ ರಮೇಶ ಧರಜಕರ, ಮಾಜಿ ಗವರ್ನರ್ ಕೆ.ಜಿ. ಟಿಕಾರೆ, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಅಶ್ವಥ್ ಸುಲಾಖೆ ಸಂದರ್ಭೋಚಿತವಾಗಿ ಮಾತನಾಡಿದರು.
ಭಾವಸಾರ ವ್ಹಿಜನ್ ಇಂಡಿಯಾ ಗದಗ ಗವರ್ನರ್ ಅಂಬಾಸ್ಸಡಾರ್ ಆಗಿ ಜಯಶ್ರೀ ತ್ರಿಮಲ್ಲೆ, ನೂತನ ಅಧ್ಯಕ್ಷರಾಗಿ ಡಾ. ಪ್ರವೀಣ ಸರ್ವದೆ, ಉಪಾಧ್ಯಕ್ಷರಾಗಿ ವೀಣಾ ಸುಲಾಖೆ, ನಿಯೋಜಿತ ಅಧ್ಯಕ್ಷರಾಗಿ ಸುನೀಲ ದಾಮೋದರ, ಕಾರ್ಯದರ್ಶಿಯಾಗಿ ಡಾ. ಅಶ್ವಿನಿ ಸರ್ವದೆ, ಸಹ ಕಾರ್ಯದರ್ಶಿಯಾಗಿ ವೀಣಾ ಕಪಟಕರ, ಖಜಾಂಚಿಯಾಗಿ ನಾಗರಾಜ ವಾದೋನೆ, ಸಹ ಖಜಾಂಚಿಯಾಗಿ ರಾಜೀವ ಬೇದ್ರೆ, ಕ್ಯಾಪ್ಟನ್ ಆಗಿ ಪರಶುರಾಮ ನವಲೆ, ನಿರ್ದೇಶಕರಾಗಿ ವಿಜಯಾ ನವಲೆ, ಸುಜಾತಾ ಸುಲಾಖೆ, ಅನುರಾಧಾ ವೈಕುಂಠೆ, ವೆಂಕಟೇಶ ದೋಂಗಡೆ, ಸಂಚನಾ ಬೇದ್ರೆ, ಕೃಷ್ಣಾ ಜಾಧವ, ವೆಂಕಟೇಶ ಮಹೇಂದ್ರಕರ, ಸಲಹಾ ಸಮಿತಿಯ ಸದಸ್ಯರಾಗಿ ಜನಾರ್ಧನ ಹವಳೆ, ರಾಜೇಂದ್ರ ತ್ರಿಮಲ್ಲೆ, ಡಾ. ದತ್ತಾತ್ರೇಯ ವೈಕುಂಠೆ, ರಾಜಶೇಖರ ಕಪಟಕರ, ಮಂಜುನಾಥ ಉತ್ತರಕರ, ಷಣ್ಮುಖ ಸುಲಾಖೆ, ಅಶ್ವಥ್ ಸುಲಾಖೆ ಅಧಿಕಾರ ವಹಿಸಿಕೊಂಡರು.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ. ಪ್ರವೀಣ ಸರ್ವದೆ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದಾಗಿ ಹೇಳಿದರು.
ಸಮಾರಂಭದಲ್ಲಿ ಶ್ರೀ ಚಿದಂಬರ ಪಂಚಾಂಗವನ್ನು ಬಿಡುಗಡೆಗೊಳಿಸಿ ಸಮಾಜಬಾಂಧವರಿಗೆ ಉಚಿತವಾಗಿ ವಿತರಿಸಲಾಯಿತು. ರಾಜು ಕಪಟಕರ ನಿರೂಪಿಸಿದರು, ಕಾರ್ಯದರ್ಶಿ ಡಾ. ಅಶ್ವಿನಿ ಸರ್ವದೆ ವಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಭಾವಸಾ ಕ್ಷತ್ರಿಯ ಸಮಾಜದ ಟ್ರಸ್ಟ್ ಕಮಿಟಿ ಅಧ್ಯಕ್ಷ ಜ್ಞಾನೇಶ್ವರ ಉತ್ತರಕರ ಮಾತನಾಡಿ, ಭಾವಸಾರ ವ್ಹಿಜನ್ ಸಮಾಜ ಬಾಂಧವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯ ಕ್ರಮ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.



