ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾದ ರಾಜ್ಯಾಧ್ಯಕ್ಷ ಅನಿಲ್ ಪಿ.ಮೆಣಸಿನಕಾಯಿ ಅವರ ನಿವಾಸದಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಜನ್ಮದಿನವನ್ನು ಆಚರಿಸಲಾಯಿತು.
ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಅನಿಲ್ ಪಿ.ಮೆಣಸಿನಕಾಯಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಕುರಿತ ಚಿಂತನೆಗಳನ್ನು ಹಂಚಿಕೊಂಡರಲ್ಲದೆ, ಅವರ ಆದರ್ಶಗಳನ್ನು ಅನುಸರಿಸಿ ಸಮಾಜಮುಖಿ ಕೆಲಸ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರುದ್ರಣ್ಣ ಗುಳಗುಳಿ, ಸಿದ್ದಣ್ಣ ಪಲ್ಲೇದ್, ಅಶೋಕ ಕರೂರು, ವಸಂತ ಪಡಗದ, ಶರಣಪ್ಪ ಚಿಂಚಳಿ, ಮುತ್ತು ಮುಸಿಗೇರಿ, ಶರಣಪ್ಪ ಕಮ್ಮಡೊಳ್ಳಿ, ರವಿ ಬಾಬು ಎಲಿಗಾರ, ಕೋರಿಶೆಟ್ಟರ ವಸ್ತ್ರದ, ಬಸು ಕುರಿ, ಉಡಚಪ್ಪ ಹಳ್ಳಿಕೇರಿ, ಪರಮೇಶ ನಾಯಕ, ವಿಜಯಲಕ್ಷ್ಮೀ ಮಾನ್ವಿ, ಚಮ್ಮಾಮ ಅಕ್ಕ, ಪದ್ಮಿನಿ, ಯೋಗೇಶ ಘೋಡಕೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.