HomeDavanagereಸಮಾಜವನ್ನು ಜಾಗೃತಿ ಮಾಡಲಾಗುತ್ತಿದೆಯೇ ಹೊರತು ಒಡೆಯುವ ಕೆಲಸ ಮಾಡುತ್ತಿಲ್ಲ: ವಚನಾನಂದ ಶ್ರೀಗಳು

ಸಮಾಜವನ್ನು ಜಾಗೃತಿ ಮಾಡಲಾಗುತ್ತಿದೆಯೇ ಹೊರತು ಒಡೆಯುವ ಕೆಲಸ ಮಾಡುತ್ತಿಲ್ಲ: ವಚನಾನಂದ ಶ್ರೀಗಳು

For Dai;y Updates Join Our whatsapp Group

Spread the love

ಹರಿಹರ: ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಪ್ರತಿವರ್ಷ ಆಚರಣೆ ಮಾಡುತ್ತಿರುವ ಹರ ಜಾತ್ರಾ ಮಹೋತ್ಸವದಿಂದಾಗಿ ಸಮಾಜವನ್ನು ಜಾಗೃತಿ ಮಾಡಲಾಗುತ್ತಿದೆಯೇ ವಿನಹ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿಲ್ಲ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಸರಳವಾಗಿ ನಡೆದ ಮಹಾಯೋಗಿನಿ ಅಕ್ಕಮಹಾದೇವಿ ವಚನಗಳ ಪಲ್ಲಕ್ಕಿ ಮಹೋತ್ಸವ ಮತ್ತು ಆರನೆಯ ವರ್ಷದ ಪೀಠಾರೋಹಣ ಸಮಾರಂಭದ ದಿವ್ಯಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ರಾಜ್ಯದ ವೀರಶೈವ ಲಿಂಗಾಯತ ಸಮಾಜದಲ್ಲಿ, ಪಂಚಮಸಾಲಿ ಸಮಾಜದ ಜನರು ಅಧಿಕ ಸಂಖ್ಯೆ ಇರುವುದರಿಂದ ಅವರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಪ್ರತಿವರ್ಷ ಹರ ಜಾತ್ರಾ ಮಹೋತ್ಸವ ಆಚರಣೆ ಮಾಡಿ, ಜಾತ್ರಾ ಸಮಯದಲ್ಲಿ ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಸಮಾಜಕ್ಕೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡಲಾಗುತ್ತದೆ ಹೊರತು ಸಮಾಜವನ್ನು ಒಡೆಯುವಂತ ಕಾರ್ಯವನ್ನು ಮಾಡುತ್ತಿಲ್ಲ ಎಂದು ಹೇಳಿದರು.

ಪಂಚಮಸಾಲಿ ಸಮಾಜದಲ್ಲಿ ಬಹುತೇಕ ಜನರು ಕೃಷಿಯನ್ನು ಹೆಚ್ಚು ಅವಲಂಬಿಸಿ ಜೀವನ ಮಾಡುವುದರಿಂದ ಈ ಬಾರಿ ಮಳೆ ಬರದೆ ರೈತರು ಸಂಕಷ್ಟದ ಜೀವನ ಮಾಡುವಂತ ಸಂದರ್ಭದಲ್ಲಿ ಅದ್ದೂರಿಯಾಗಿ ಹರ ಜಾತ್ರಾ ಮಹೋತ್ಸವ ಆಚರಣೆ ಮಾಡದೆ ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ ಸಕಲ ವೀರಶೈವ ಲಿಂಗಾಯತ ಸಮಾಜಕ್ಕೆ ಒಂದೇ ರೀತಿಯ ಮೀಸಲಾತಿ ಇರಬೇಕೆಂದು ನಮ್ಮ ಅಭಿಪ್ರಾಯವಾಗಿದ್ದು, ನಾವು ಈಗಾಗಲೇ ಎಲ್ಲಾ ಲಿಂಗಾಯತರನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಅನೇಕ ರೀತಿಯ ಹೋರಾಟ ಮಾಡಲಾಗಿದ್ದು ಜೊತೆಗೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಕೇಳಿದಾಗ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಯವರು ನಮಗೆ 2 ಸಿ ಮತ್ತು 2ಡಿ ಮೀಸಲಾತಿ  ಘೋಷಿಸಿದ ವೇಳೆಯಲ್ಲಿ ನಾವು ಅದನ್ನು ಸ್ವಾಗತ ಮಾಡಲಿಲ್ಲ ಮತ್ತು ವಿರೋಧ ಕೂಡ ಮಾಡಲಿಲ್ಲ.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಪಡೆಯವ ನಿಟ್ಟಿನಲ್ಲಿ ಈಗಲೂ ಕೂಡ ಕಾನೂನು ಹೋರಾಟ ನಡೆಸುತ್ತಿದ್ದು, ಸುಮಾರು 900 ಪುಟಗಳಷ್ಟು ದಾಖಲೆಗಳನ್ನು ಸರ್ಕಾರಕ್ಕೆ ನೀಡಿದ್ದು, ಆ ದೃಷ್ಟಿಯಿಂದ ನಮಗೆ ನ್ಯಾಯಲಯದಲ್ಲಿ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಹೇಳಿದರು.

“ರಾಷ್ಟ್ರದ ವಿಚಾರ ಬಂದಾಗ ನಾವೆಲ್ಲ ಭಾರತೀಯರಾಗಿ, ರಾಜ್ಯದ ವಿಚಾರ ಬಂದಾಗ ಕನ್ನಡಿಗರಾಗಿ, ಪರಂಪರೆ, ಸಂಸ್ಕೃತಿ ವಿಚಾರ ಬಂದಾಗ ವೀರಶೈವ ಲಿಂಗಾಯತರಾಗಿ, ಸಮುದಾಯ ವಿಚಾರ ಬಂದಾಗ ನಾವೆಲ್ಲರೂ ಪಂಚಮಸಾಲಿಗಳಾಗಿ.  ರಾಷ್ಟ್ರ ಧರ್ಮದ ವಿಚಾರ ಬಂದಾರ ನಾವೆಲ್ಲ ಹಿಂದೂಗಳಾಗಿ,
ವೀರಶೈವ ಲಿಂಗಾಯತ ಎಂಬ ಭೇದಭಾವ ಮರೆತು ನಾವೆಲ್ಲ ಹಿಂದೂಗಳು ಒಂದೇ ಎಂಬ ಭಾವನೆಗಳನ್ನು ಬೆಳೆಸಿಕೊಳ್ಳೋಣ”

ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲಿ ದೀಪವನ್ನು ಹಚ್ಚಿ ಆ ದಿನದಂದು ರಾಮನವಮಿ ಆಚರಣೆ ಎಂದು ಭಾವಿಸಿಕೊಂಡು ತಿಳಿದು ಪೂಜೆ ಮಾಡಿ ರಾಮನನ್ನು ಆರಾಧಿಸಬೇಕು ಎಂದು ಹೇಳಿದರು. 

ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಪಂಚಮಸಾಲಿ ಸಮುದಾಯಕ್ಕೆ ಜನಸಂಖ್ಯೆಯ ಅನುಗುಣವಾಗಿ ಹೆಚ್ಚಿನ ಪ್ರಾತಿನಿದ್ಯ ನೀಡಬೇಕೆಂದು ಆಗ್ರಹಿಸಿದರು.

ದಾವಣಗೆರೆ ಶಾಸಕ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ರೀತಿಯ ರಾಜಕೀಯ ಮಾಡದೆ ಎಲ್ಲಾ ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡುವುದಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ಈ ವೇಳೆ ವಿವಿಧ ಅಲಗೂರು ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಮೈಸೂರಿನ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹದಿನೈದಕ್ಕೂ ಹೆಚ್ಚಿನ ವಿವಿಧ ಮಠಗಳ ಸ್ವಾಮೀಜಿಯವರು ಮಾತನಾಡಿದರು.

ಈ ಸಂದರ್ಭದಲ್ಲಿ ರಾಣೆಬೆನ್ನೂರು ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ದಾವಣಗೆರೆ ಪ್ರಭಾ ಮಲ್ಲಿಕಾರ್ಜುನ್,  ಪಂಚಮಸಾಲಿ ಸಮಾಜದ ಪ್ರಧಾನ ಧರ್ಮದರ್ಶಿಗಳಾದ ಬಿ.ಸಿ. ಉಮಾಪತಿ, ಬಸವರಾಜ್ ದಿಂಡೂರು, ಪಿ.ಡಿ. ಶಿರೂರು, ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೂಜಾರ್, ಆಡಳಿತಾಧಿಕಾರಿ ರಾಜಕುಮಾರ್ ಹೊನ್ನಾಳಿ, ಪ್ರಕಾಶ್ ಪಾಟೀಲ್ ದಾವಣಗೆರೆ, ವಸಂತ್ ಉಲ್ಲತ್ತಿ, ರಶ್ಮಿ ಕುಂಕದ್, ಡಿ.ಜೆ. ಶಿವಾನಂದಪ್ಪ, ಗುತ್ತೂರು ಹಾಲೇಶ್ ಗೌಡ್ರು, ಮಂಜುನಾಥ್ ಪುರವಂತರ, ಕರಿಬಸಪ್ಪ ಕಂಚಿಕೇರಿ ಹರಿಹರ, ಕರಿಬಸಪ್ಪ ಗುತ್ತೂರು, ಬಾದಮಿ ಜಯಣ್ಣ,  ಲಿಂಗಾರಾಜ್ ಪಟೇಲ್ ಬೆಳಕೇರಿ, ಶಿವಪ್ಪ ಬಂಕಾಪುರ, ಮಲ್ಲಿಕಾರ್ಜುನ, ಆಶೋಕ ಬೆಂಡಿಗೇರಿ, ಸೋಮಶೇಖರ್ , ಬಾತಿ ರವಿಕುಮಾರ್, ಶ್ರೀಶೈಲ,  ಇತರರು ಹಾಜರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!